Jannah Theme License is not validated, Go to the theme options page to validate the license, You need a single license for each domain name.
ಮಾಹಿತಿ
Trending

ಉತ್ತರಕನ್ನಡದ ಇಂದಿನ‌ ಕರೊನಾ ವಿವರ: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 46 ಕೋವಿಡ್ ಕೇಸ್ ದಾಖಲಾಗಿದೆ. ಕಾರವಾರ 4, ಅಂಕೋಲಾ 17 , ಕುಮಟಾ 10, ಹೊನ್ನಾವರ 07, ಭಟ್ಕಳ. 2, ಶಿರಸಿ 4, ಸಿದ್ದಾಪುರ 1, ಯಲ್ಲಾಪುರ 1 ಕೇಸ್ ದೃಢಪಟ್ಟಿದೆ. ಹೊನ್ನಾವರದಲ್ಲಿ ಒಂದು ಸಾವಾಗಿದೆ.

ಇದೇ ವೇಳೆ 43 ಮಂದಿ ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರ 3, ಕುಮಟಾ 24, ಭಟ್ಕಳದಲ್ಲಿ 5, ಶಿರಸಿ 3, ಹಳಿಯಾಳ 5, ಜೋಯ್ಡಾದಲ್ಲಿ 3 ಮಂದಿ ಗುಣಮುಖರಾಗಿ,‌ಮನೆಗೆ ಮರಳಿದ್ದಾರೆ.

ಹಬ್ಬದ ಸಂಭ್ರಮದ ನಡುವೆ ಹೆಚ್ಚಿದ ಹೊಸ ಕೊವಿಡ್ ಕೇಸ್

ಅಂಕೋಲಾ ಜುಲೈ 21: ತಾಲೂಕಿನ ಜನತೆ ಬಕ್ರೀದ್ ಮತ್ತು ಆಶಾಡ ಹಬ್ಬದ್ದ ಸಂಭ್ರಮದಲ್ಲಿರುವ ನಡುವೆಯೇ ಈ ದಿನ 16 ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟೂ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 79 ಕ್ಕೆ ಏರಿಕೆಯಾಗಿದೆ..

ಅಂಕೋಲಾ, ಕಾರವಾರ,ಕುಮಟಾ, ಮಂಗಳೂರಿನ ಆಸ್ಪತ್ರೆಗಳಲ್ಲಿ ತಲಾ ಒಬ್ಬರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಲಕ್ಷಣಗಳುಳ್ಳ ಇತರೆ 75 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ. ಈ ವರೆಗೆ ತಾಲೂಕಿನಲ್ಲಿ 63 ಕೊವಿಡ್ ಸಾವಿನ ಪ್ರಕರಣ ದಾಖಲಾಗಿದೆ.

ಜುಲೈ 20 ರ ಬುಧವಾರ, ಹಳವಳ್ಳಿ (136), ಅಗಸೂರ (57), ಬಳಲೆ (74), ಅಚವೆ (108), ಅಲಗೇರಿ (135), ಪ್ರಾ. ಆ. ಕೇಂದ್ರ ಹಟ್ಟಿಕೇರಿ (54), ತೆಂಕಣಕೇರಿ (106) ಸೇರಿ ತಾಲೂಕಿನ ಒಟ್ಟೂ 670 ಜನರಿಗೆ ಎರಡನೇ ಹಂತದ ಲಸಿಕೆ ನೀಡಲಾಗಿದೆ.

ಲಸಿಕೆ ಪೂರೈಕೆ ಕೊರತೆಯಿಂದ ಜುಲೈ 22ರ ಗುರುವಾರ ತಾಲೂಕಿನ ಯಾವುದೇ ಭಾಗಗಳಲ್ಲಿ ವ್ಯಾಕ್ಸಿನೇಷನ್ ನಡೆಸಲಾಗುತ್ತಿಲ್ಲ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button