Uttara Kannada
Trending

ಬಡ ವಿಕಲಚೇತನರಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆ

ಹೊನ್ನಾವರ : ಇಲ್ಲಿನ ಪಟ್ಟಣ ಪಂಚಾಯತ ವತಿಯಿಂದ 2020-21ನೇ ಸಾಲಿನ ಎಸ್. ಎಫ್. ಸಿ ಶೇ5% ವಿಕಲಚೇತನರಿಗೆ ಸೌಲಭ್ಯ ನೀಡುವ ಯೋಜನೆಯಲ್ಲಿ 49439 ರೂ. ವೆಚ್ಚದಲ್ಲಿ ಬಡ ವಿಕಲಚೇತನರಿಗೆ ವಿದ್ಯುತ ಚಾಲಿತ ಹೊಲಿಗೆ ಯಂತ್ರ ವಿತರಿಸಲಾಯಿತು. 4 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಹೊನ್ನಾವರ ಪ್ರಭಾತನಗರದ ಸುಲೋಚನ ನಾಗಪ್ಪ ಮೇಸ್ತ, ಚರ್ಚ ರಸ್ತೆಯ ಸವಿತಾ ವೆಂಕಟೇಶ ಮೇಸ್ತ, ಫಾರೆಸ್ಟ ಕಾಲೋನಿಯ ವನಿತಾ ಗಜಾನನ ನಾಯ್ಕ, ರಮಿಜಾ ಅಬ್ದುಲ್ ಖಾದರ ಶೇಖ ಅವರಿಗೆ ಪಪಂ ಅಧ್ಯಕ್ಷ ಶಿವರಾಜ ಮೇಸ್ತ ಅವರು ವಿವರಿಸಿದರು.

ಇನ್ನು 2020-21ನೇ ಸಾಲಿನ ಆಯ-ವ್ಯಯದಲ್ಲಿ ಪಂಚಾಯತ ನಿಧಿಯ ಶೇ 5% ರಷ್ಟು ಬಡ ವಿಕಲಚೇತನರಿಗಾಗಿ 18500 ರೂ ಕಾದಿರಿಸಿದ್ದು, ಸದರಿ ಅನುದಾನದಲ್ಲಿ ಇಬ್ಬರು ಫಲಾನುಭವಿಗಳಿಗೆ ಸ್ಟೀಲ್ ಚೇರ್ ವಿತರಣೆ ಮಾಡಲಾಯಿತು. ಉದ್ಯಮನಗರ ಮಂಜುನಾಥ ಪರಮೇಶ್ವರ ಮೇಸ್ತ, ರಾಘವೇಂದ್ರ ದೇವಿದಾಸ ಮೇಸ್ತ ಅವರಿಗೆ ವಿತರಿಸಲಾಯಿತು.

ಇನ್ನು 2020-21ನೇ ಸಾಲಿನ ಎಸ್.ಎಫ್.ಸಿ ಶೇ24.10% ಯೋಜನೆಯಲ್ಲಿ ಅಂಬೇಡ್ಕರ ಸೇವಾ ಸಂಘ ರಾಯಲಕೇರಿ ಅವರಿಗೆ ಮನೆ ಬಳಕೆಯ ಪಾತ್ರೆ ಪಗಡೆ ನೀಡುವ ಕುರಿತು 121965 ರೂ. ಕಾದಿರಿಸಿದ್ದು, ಈ ಅನುದಾನದಲ್ಲಿ ಮನೆ ಬಳಕೆಯ ಅಗತ್ಯ ಸಾಮಗ್ರಿಗಳನ್ನು ನೀಡಲಾಯಿತು. ಮನೆ ಬಳಕೆಯ ಸಗ್ರಿಗಳಾದ ದೊಡ್ಡ ತೋಪು, ಊಟದ ಪೈಬರ್ ಪ್ಲೇಟ್, ಗ್ರಾಂಡರ್ ಇತರೆ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button