ಯಲ್ಲಾಪುರ: ಪುರುಷ ಹಾಗೂ ಮಹಿಳೆ ಎಂಬ ತಾರತಮ್ಯ ಮಾಡದೇ ಮಹಿಳೆಯರನ್ನು ಗೌರವಿಸುವ ಸಮಾಜ ಇನ್ನಷ್ಟು ಸದೃಢವಾಗಬೇಕಿದೆ ಎಂದು ಉಪನ್ಯಾಸಕಿ ಶ್ಯಾಮಲಾ ಕೆರೆಗದ್ದೆ ಹೇಳಿದರು.
ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಬೆಳಕಿನಂದ ಸಾಂಸ್ಕೃತಿಕ ವೇದಿಕೆಯ ಆಯೋಜನೆಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಸಮಾನತಾ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಉಪನ್ಯಾಸಕಿ ಗೀತಾ ಎಚ್.ವಿ ಮಾತನಾಡಿ, ಪ್ರತಿಯೊಬ್ಬರೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು ಎಂದು ಹೇಳಿದರು. ಇದೇ ವೇಳೆ ಅಂತರಾಷ್ಟ್ರಿಯ ಮಹಿಳಾ ಸಮಾನತೆಯ ಪೋಸ್ಟರ್ ಗಳನ್ನು ಪ್ರದರ್ಶಿಸಲಾಯಿತು.
ವಿಸ್ಮಯ ನ್ಯೂಸ್ ಯಲ್ಲಾಪುರ