- ರಾಜ್ಯ ಕಿಸಾನ್ ಕಾಂಗ್ರೆಸ್ ಸಭೆಯಲ್ಲಿ ಭಾಗಿ
- ವಿವಿಧ ಮುಖಂಡರೊಂದಿಗೆ ಶಿವಾನಂದ ಹೆಗಡೆ ಚರ್ಚೆ
- ಕೆಪಿಸಿಸಿಗೆ 50 ಸಾವಿರ ವೈಯಕ್ತಿಕವಾಗಿ ನೀಡಿಕೆ
- ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾರ್ಯವೈಖರಿಗೆ ಅಭಿನಂದನೆ
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷನಾದ ಶಿವಾನಂದ ಹೆಗಡೆ ಕಡತೋಕಾ ಅವರು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ರಾಜ್ಯ ಕಿಸಾನ್ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರೈತರ ಸಮಸ್ಯೆಗಳ ಕುರಿತು ವಿವಿಧ ಮುಖಂಡರುಗಳೊಂದಿಗೆ ಶಿವಾನಂದ ಹೆಗಡೆಯವರು ಚರ್ಚೆ ನಡೆಸಿದರು. ಈ ವೇಳೆ ವೈಯಕ್ತಿವಾಗಿ ಕೆಪಿಸಿಸಿ ಪರಿಹಾರ ನಿಧಿಗೆ 50 ಸಾವಿರ ರೂಪಾಯಿಯ ಚೆಕ್‌ನನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೂಲಕ ಹಸ್ತಾಂತರಿಸಿದರು. ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ವೇಳೆ ಲಾಕ್‌ಡೌನ್ ಸಮಯದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷನಾದ ಶಿವಾನಂದ ಹೆಗಡೆ ಕಡತೋಕಾ ಜೊತೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ದೀಪಕ್ ನಾಯ್ಕ್ ಮಂಕಿ ಇದ್ದರು.
ಕೆಪಿಸಿಸಿ ಕಚೇರಿ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದು, ಬಿಡುವಿಲ್ಲ ಕೆಲಸದ ನಡುವೆಯೂ ಪ್ರತಿಯೊಬ್ಬರ ಸಮಸ್ಯೆಯನ್ನು ಆಲಿಸಿ, ಪರಿಹಾರ ಸೂಚಿವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯವೈಖರಿಯನ್ನು ಮೆಚ್ಚಲೇಬೇಕು. ಅಲ್ಲದೆ, ಲಾಕ್‌ಡೌನ್ ವೇಳೆ ನಿಷ್ಕ್ರೀಯವಾಗಿದ್ದ ಸರ್ಕಾರವನ್ನು ಎಚ್ಚರಿಸಿದ ರೀತಿ, ಕಾರ್ಮಿಕರ ರಾಜ್ಯಕ್ಕೆ ಕರೆಸಿಕೊಳ್ಳುವಲ್ಲಿ ಅವರ ಹೋರಾಟ ಮಾದರಿಯಾಗಿದೆ.
–ಶಿವಾನಂದ ಹೆಗಡೆ ಕಡತೋಕಾ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರು