ಮಾಹಿತಿ
Trending

ಜಿಲ್ಲೆಯಲ್ಲಿಯೂ ವ್ಯವಹಾರಕ್ಕೆ ತೆರೆದುಕೊಳ್ಳಲು ಸಿದ್ಧತೆ ನಡೆಸುತ್ತಿರುವ ಮಲ್ಟಿಸ್ಟೇಟ್ ಕೋ ಆಪ್ ಸೊಸೈಟಿ :ಭಟ್ಕಳ ಹಾಗೂ ಅಂಕೋಲಾದಲ್ಲಿ ಅತಿಥಿ ಸಮಾವೇಶ

ಅಂಕೋಲಾ : ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿದ್ದು,ಮಹಾರಾಷ್ಟ್ರ,ಗುಜರಾತ್,ಗೋವಾ ಹಾಗೂ ಕರ್ನಾಟಕ ಸೇರಿ 126 ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ತಿರುಮಲ್ಲ ತಿರುಪತಿ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್,ಭಾರತ ಸರ್ಕಾರದ ಬಹುರಾಜ್ಯ ರಾಜ್ಯ ಕೋ-ಆಪರೇಟಿವ್ ಸೊಸೈಟಿ ಕಾಯ್ದೆ 2002 ರಡಿ ನೊಂದಾವಣೆ ಗೊಂಡಿದ್ದು, ತನ್ನ ಒಟ್ಟಾರೆ ನಿರ್ವಹಣೆಗಾಗಿ 2015ರಲ್ಲಿ ಪ್ರತಿಷ್ಠಿತ ISO – 9001 ಪ್ರಮಾಣಿತವಾಗಿದೆ.

ಅಂತರಾಷ್ಟ್ರೀಯ ಸಹಕಾರಿ ಒಕ್ಕೂಟದ ಸದಸ್ಯತ್ವವನ್ನು ಹೊಂದಿರುವ ಈ ಸೊಸೈಟಿಯು ಜಿಲ್ಲೆಯ ಕಾರವಾರದಲ್ಲಿ ರಾಜ್ಯದ ಪ್ರಧಾನ ಕಚೇರಿ ಹೊಂದಿದ್ದು,ಅಕ್ಟೋಬರ್ 3ರ ರವಿವಾರ ಬೆಳಿಗ್ಗೆ ಭಟ್ಕಳದಲ್ಲಿ ಅತಿಥಿ ಸಮಾವೇಶ ನಡೆಸಲಿದೆ.

ಬಳಿಕ ಮಧ್ಯಾಹ್ನ 3:30 ಕ್ಕೆ ಅಂಕೋಲಾ ತಾಲೂಕಿನ ಲಕ್ಷೇಶ್ವರದ ದೈವಜ್ಞ ಕಲ್ಯಾಣ ಮಂದಿರದ ಸಭಾಭವನದಲ್ಲಿ ಅತಿಥಿ ಸಮಾವೇಶ ಆಯೋಜಿಸಿ, ಸೊಸೈಟಿ ನಡೆದು ಬಂದ ದಾರಿ,ಉಳಿತಾಯದ ಅರಿವು,ಸೊಸೈಟಿ ಮತ್ತು ಬ್ಯಾಂಕ್ ನಡುವಿನ ಹೆಚ್ಚಿನ ಮಾಹಿತಿ ಮತ್ತಿತರ ಅಂಶಗಳ ಬಗ್ಗೆ ಮತ್ತಷ್ಟು ವಿಶ್ವಾಸ ಮೂಡಿಸಲು ಸಜ್ಜಾಗುತ್ತಿದೆ.

ಈ ಸೊಸೈಟಿಯು ಆಧುನಿಕ ತಂತ್ರಜ್ಞಾನಗಳೊಂದಿಗೆ ಸುಲಭ ಮತ್ತು ತ್ವರಿತ ಸೇವೆ ನೀಡುವ ಉದ್ದೇಶದಿಂದ,ಕೋರ್ ಬ್ಯಾಂಕಿಂಗ್,ಇಂಟರ್ನೆಟ್ ಬ್ಯಾಂಕಿಂಗ್ ಮತ್ತಿತರ ಸೌಲಭ್ಯಗಳನ್ನು ಅಳವಡಿಸಿಕೊಂಡಿದ್ದು,ಆಕರ್ಷಕ ಬಡ್ಡಿದರದಲ್ಲಿ ಠೇವು ಸಂಗ್ರಹ ಹಾಗೂ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದೆ.ವಿಶೇಷವೆಂದರೆ ಭಾನುವಾರವೂ ಸಹ ವ್ಯವಹಾರಕ್ಕಾಗಿ ಈ ಸೊಸೈಟಿಯ ಶಾಖೆಗಳು ತೆರೆದಿರಲಿವೆ. ಅಂಕೋಲಾ ಸುತ್ತಮುತ್ತಲಿನ ಜನತೆ ಅತಿಥಿ ಸಮಾವೇಶಕ್ಕೆ ಆಗಮಿಸಿ,ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ್ ನಾಯ್ಕ ಅಂಕೋಲಾ

Back to top button