ಸ್ಥಳಪರಿಶೀಲನೆ ನಡೆಸಿದ ಶಾಸಕರು
ಅಹವಾಲು ಸಲ್ಲಿಸಿದ ಅಂಗಡಿಕಾರರು
ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ?
ಹೊನ್ನಾವರ: ನೂತನ ಬಸ್ ನಿಲ್ದಾಣದ ಕಾಮಗಾರಿಗೆ ಸಾರಿಗೆ ಸಚಿವರಾದ ಲಕ್ಷ್ಮಣ ಸೌದಿಯವರು ಕಳೆದ ಎರಡುಮೂರು ಮೂರು ತಿಂಗಳ ಹಿಂದೆ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿದ್ದರು. ಆದರೆ ಕರೋನಾ ಲಾಕ್ ಡೌನನಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಮತ್ತೆ ಈಗ ಕಾಮಗಾರಿ ಆರಂಭಗೊಂಡಿದ್ದು, ಹಳೆಯ ಕಟ್ಟಡ ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಬಸ್‍ಗಳನ್ನು ಪಟ್ಟಣದ ಪೋಲಿಸ್ ಮೈದಾನದಿಂದ ಒಡಾಟ ನಡೆಸುವುದರ ಬಗ್ಗೆ ಚಿಂತನೆ ನಡೆದಿದೆ. ಆದರೆ ಈಗಿರುವ ನಿಲ್ದಾಣದ ಸುತ್ತಮುತ್ತಲಿನ ಅಂಗಡಿಕಾರರಲ್ಲಿ ಆತಂಕ ನಿರ್ಮಾಣವಾಗಿದ್ದು ಅವರು ಶಾಸಕ ದಿನಕರ ಶೆಟ್ಟಿಯವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು. ಬಸ್ ನಿಲ್ದಾಣದ ಹಳೆಯ ಕಟ್ಟಡ ತೆರವು ಕಾರ್ಯ ವಿಕ್ಷಣೆಗೆ ಭೇಟಿನೀಡಿದ ಸಂದರ್ಭದಲ್ಲಿ ಅಂಗಡಿಕಾರರು ತಮ್ಮ ಸಮಸ್ಯೆಗಳನ್ನು ಶಾಸಕರಲ್ಲಿ ಹೇಳಿಕೊಂಡು ಇಲ್ಲಿಯೇ ಬಸ್ ಒಡಾಟವನ್ನು ಮುಂದುವರಿಸಿ ಎಂದು ಶಾಸಕರಲ್ಲಿ ವಿನಂತಿಸಿಕೊಂಡರು,
ನಂತರ ನಮ್ಮ ವಿಸ್ಮಯ ಟಿವಿ ಯೋಂದಿಗೆ ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ, ಹೊನ್ನಾವರಕ್ಕೆ ನೂತನ ಬಸ್ ನಿಲ್ದಾಣ ಬೇಕು ಎಂದು ಬಹಳಷ್ಟು ದಿನಗಳಿಂದ ಬೇಡಿಕೆ ಇತ್ತು . ಇದಕ್ಕೆ 5 ರಿಂದ 6 ಕೋಟಿ ಹಣ ಮಂಜುರಿ ಮಾಡಿಕೋಂಡು ಬಂದಿದ್ದೇನೆ. ನೂತನ ಕಟ್ಟಡವನ್ನು ಒಂದು ವರ್ಷಗಳಲ್ಲಿ ನಿರ್ಮಾಣ ಮಾಡಿ ಕೊಡಬೇಕು ಎಂದು ಬೇಡಿಕೆ ಇಟ್ಟಿದೇವೆ. ಇದಕ್ಕೆ ಗುತ್ತಿಗೆದಾರರು ಸ್ಪಂದಿಸಿದ್ದಾರೆ ಎಂದರು. ಇದರ ವಿಡಿಯೋ ಸುದ್ದಿಯನ್ನು ನೋಡಲು ಫೇಸ್‌ಬುಕ್ ಐಕಾನ್ ಕ್ಲಿಕ್ ಮಾಡಿ
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ಭಂಡಾರಿ, ಪಟ್ಟಣ ಪಂಚಾಯತ ಸದಸ್ಯರಾದ ವಿಜು ಕಾಮತ್, ಶ್ರೀಪಾಧ ನಾಯ್ಕ, ಮುಕಂಡರಾದ ಎಮ್ ಎಸ್ ಹೆಗಡೆ ಕಣ್ಣಿ, ರವಿ ನಾಯ್ಕ ರಾಯಲಕೇರಿ, ಅಂಗಡಿಕಾರರು ಮುಂತಾದ ಸಾರ್ವಜನಿಕರು ಇದ್ದರು,
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,