ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಇಂದು ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಪ್ರದೋಷ ಪರ್ವದ ದಿನದ ಪ್ರಯುಕ್ತ ಲೋಕಕಲ್ಯಾಣಕ್ಕಾಗಿ ಮತ್ತು ನಮ್ಮ ದೇಶದ ಸೈನಿಕರ ರಕ್ಷಣೆಗಾಗಿ ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಜಗತ್ತಿನ ಏಕೈಕ ಆತ್ಮಲಿಂಗವಾದ ಶ್ರೀಮಹಾಬಲೇಶ್ವರ ದೇವರಲ್ಲಿ ವಿಶೇಷ ಪ್ರಾರ್ಥನೆ ಕೈಗೊಳ್ಳಲಾಯಿತು. ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಮತ್ತು ನಿವೃತ್ತರಾದವರಿಗೆ ಶ್ರೀಮಹಾಬಲೇಶ್ವರ ದೇವಾಲಯ ಗೋಕರ್ಣದಲ್ಲಿ ಶ್ರೀದೇವರ ದರ್ಶನಕ್ಕೆ ವಿಶೇಷ ಆದ್ಯತೆ ಇರುತ್ತದೆ ಎನ್ನುವುದನ್ನು ಈ ಸಂದರ್ಬದಲ್ಲಿ ನೆನಪಿಸಿಕೊಳ್ಳಬಹುದು.
Idagunji Mahaganapati
ಇಷ್ಟಾರ್ಥ ಸಿದ್ಧಿಸುವ ಇಡಗುಂಜಿ ಮಹಾಗಣಪತಿ ದರ್ಶನ
By Vishnu Hegde