Follow Us On

WhatsApp Group
Uttara Kannada
Trending

ಶುಕ್ರವಾರ ಜಗದೀಶ್ ಶೆಟ್ಟರ್ ಜಿಲ್ಲಾ ಪ್ರವಾಸ|ಮಧ್ಯಾಹ್ನ 1 ಗಂಟೆಗೆ ಅಂಕೋಲಾಗೆ ಭೇಟಿ

ಅಂಕೋಲಾ: ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್‍ರವರು ಜೂನ್ 19 ಶುಕ್ರವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು ಅಂಕೋಲಾಕ್ಕೂ ಭೇಟಿ ನೀಡಲಿದ್ದಾರೆ.
ಬೆಳಿಗ್ಗೆ ಹುಬ್ಬಳ್ಳಿಯಿಂದ ಹೊರಟು 10.30ಕ್ಕೆ ಪರಿವೀಕ್ಷಣಾ ಮಂದಿರ ಯಲ್ಲಾಪುರ ತಲುಪಲಿರುವ ಸಚಿವರು ತದನಂತರ 1.00ಗಂಟೆಗೆ ಅಂಕೋಲಾಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಕಾರವಾರ ಜಿಲ್ಲೆಯಲ್ಲಿ ಹೊಸದಾಗಿ ಪ್ರಸ್ತಾಪಿಸಲಾದ ವಿಮಾನ ನಿಲ್ದಾಣ ಪರಿವೀಕ್ಷಣೆ ನಡೆಸಿ ನಂತರ ಬೇಲೇಕೇರಿ ಬಂದರಿಗೆ ಬೇಟಿ ನೀಡಿ ಪರಿಶೀಲಿಸಲಿದ್ದಾರೆ. ತದನಂತರ ಜಿಲ್ಲಾಕೇಂದ್ರ ಕಾರವಾರಕ್ಕೆ ತೆರಳಿ ವಿವಿಧ ಸಭೆ ನಡೆಸಲ್ಲಿದ್ದಾರೆ.
ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಸುದ್ದಿ ಕೇಳಿ ಬಂದಾಗಿನಿಂದಲೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಹಿಂದಿನ ಪ್ರಸ್ತಾವನೆಯನ್ನು ಮರುಪರಿಶೀಲಿಸಿ, ಹೆಚ್ಚಿನ ಜನವಸತಿ ಪ್ರದೇಶಗಳು ಉದ್ದೇಶಿತ ವಿಮಾನ ನಿಲ್ದಾಣ ವ್ಯಾಪ್ತಿಯಿಂದ ಕೈಬಿಟ್ಟು ಕಡಿಮೆ ಭೂಮಿಯಲ್ಲಿಯೇ ಯೋಜನೆಯನ್ನು ಕಾರ್ಯಗತಗೊಳಿಸುವ ಉದ್ದೇಶ ಇದೆ ಎನ್ನಲಾಗಿದೆ. ಒಟ್ಟಾರೆಯಾಗಿ ಸಚಿವರ ಭೇಟಿಯಿಂದ ಈ ಭಾಗದ ಜನತೆಗೆ ಕೊಂಚವಾದರೂ ರಿಯಾಯತಿ ಮತ್ತು ನೆಮ್ಮದಿಗೆ ಕಾರಣವಾಗುವುದೇ ಎಂದು ಕಾದು ನೋಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

Back to top button