ಹೊನ್ನಾವರದ ಕಾಸರಕೋಡಿನಲ್ಲಿ ಕರೊನಾ ಪ್ರತ್ಯಕ್ಷ

ಹೊನ್ನಾವರ: ಜಿಲ್ಲೆಯಲ್ಲಿ ಕರೊನಾ ರಣಕೇಕೆ‌ಹಾಕುತ್ತಿದ್ದು, ಮಹಾರಾಷ್ಟ್ರದಿಂದ ಬಂದವರಲ್ಲೇ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಮುಂಬೈನಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಹೋಮ್ ಕ್ವಾರಂಟೈನ್ ಗೆ ಶಿಫ್ಟ್ ಆಗಿದ್ದ ಹೊನ್ನಾವರದ ಕಾಸರಕೋಡಿನ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಈಕೆಯ ದ್ವಿತೀಯ ವರದಿಯಲ್ಲಿ ಸೋಂಕು ಪತ್ತೆಯಾಗಿದೆ.
ಮಹಿಳೆಯೊಂದಿಗೆ ಬಂದಿದ್ದ ಪುರುಷನ ವರದಿ ಬಾಕಿ ಇದ್ದು, ಮಹಿಳೆಗೆ ಸೋಂಕು ದೃಢಪಟ್ಟಿರುವುದು. ಈಕೆಯ ಪ್ರಾಥಮಿಕ‌ಸಂಪರ್ಕಕ್ಕೆ ಬಂದ ಏಳು ಜನರನ್ನು ಗುರುತಿಸಿ,‌ಕ್ವಾರಂಟೈನ್ ಕಳುಹಿಸಲಾಗಿದೆ. ಹೆಲ್ತ್ ಬುಲೆಟಿನ್ ನಲ್ಲಿ ಈ ಬಗ್ಗೆ ಮಾಹಿತಿ ಪ್ರಕಟವಾಗಲಿದೆ. ಸದ್ಯ ಮಹಿಳೆಯನ್ನು  ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

[sliders_pack id=”1487″]
Exit mobile version