Follow Us On

WhatsApp Group
ಮಾಹಿತಿ
Trending

ಮಕ್ಕಿಮನೆ ಕಲಾವೃಂದ ದಿಂದ ವಿನೂತನ ಶೈಲಿಯಲ್ಲಿ ಯಕ್ಷೋಲ್ಲಾಸ ಎಂಬ ಯಕ್ಷನಾಟ್ಯ ನಾಟ್ಯದ ಪ್ರಸ್ತುತಿ

ಮಂಗಳೂರು :- ವಿಶ್ವ ಕಂಟಕವಾದ ಕೊರೋನದ ಈ ವಿಷಮ ಪರಿಸ್ಥಿತಿಯ ಸಂದರ್ಭದಲ್ಲಿ ಯಾವುದೇ ವೇದಿಕೆಗಳಲ್ಲಿ ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಕಲೆಗೆ ಪ್ರೋತ್ಸಾಹ ನೀಡುವ ಸಲುವಾಗಿ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಕಲಾವಿದರಲ್ಲಿ ಇರುವ ಪ್ರತಿಭೆಗೆ ಉತ್ತಮ ವೇದಿಕೆಯನ್ನು ಪೇಸ್ ಬುಕ್ ಹಾಗೂ ಯೂಟ್ಯೂಬ್ ಚಾನಲ್ ಸೇರಿದಂತೆ ಸಮಾಜಿಕ ಜಾಲತಾಣ ಗಳಲ್ಲಿ ನಿರ್ಮಿಸಿ ಲಾಕ್ ಡೌನ್ ಆರಂಭದಿಂದಲೂ ಸಂಗೀತ, ನೃತ್ಯ, ಚಿತ್ರಕಲೆ, ಪ್ರಬಂಧ ಬರೆಯುವುದು ಹೀಗೆ ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ನೆಡೆಸಿರುತ್ತದೆ.
ಇದೀಗ ಮತ್ತೂಂದು ಪ್ರಯೋಗ ವೆಂಬಂತೆ ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಪ್ರೋತ್ಸಾಹಿಸುವ
ಯಕ್ಷಗಾನ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಅರಲಿಸುತ್ತಿರುವ ಬಾಲ ಹಾಗೂ ಯುವ ಕರಾವಳಿ ಪ್ರದೇಶದ ಕಲಾವಿದರಾದ ಸಾಯಿಸುಮಾ ನಾವಡ ಕಾರಿಂಜ,ವಿಜೇಶ್ ದೇವಾಡಿಗ ಮಂಗಳಾದೇವಿ, ರಕ್ಷಿತ್ ಪೂಜಾರಿ ಕಾರ್ಕಳ, ಮೈತ್ರಿ ಭಟ್ ಮಾವ್ವಾರು, ವಿನುತಾ ಕೆ ಗಟ್ಟಿ ಕೈರಂಗಳ, ಟಿ. ಎನ್ ಶ್ರೀರಕ್ಷಾ ಭಟ್ ಕಳಸ, ಕೃತಿ ವಿ ರಾವ್ ಚಿತ್ರಾಪುರ, ವಿದ್ಯಾ ಭಟ್ ಕುಂಟಿಕಾನಮಠ ,ಅನನ್ಯ ಬೆಳ್ತಂಗಡಿ ,ಸುಷ್ಮಿತಾ ಆರ್ ಕಳಸ
ಹಾಗೂ ಬಾಲ ಪ್ರತಿಭೆಗಳಾದ ಅಭಿನವಿ ಹೊಳ್ಳ ಬೈಕಂಪಾಡಿ, ಸ್ವಸ್ತಿಶ್ರೀ ಕದ್ರಿ ಮಂಗಳೂರು, ಖ್ಯಾತಿ ಆರ್ ಬಂಜನ್ ಸುರತ್ಕಲ್, ವಿಧಿಶಾ ಸುರತ್ಕಲ್, ಯಶ್ನ ಸುರತ್ಕಲ್
ಇವರ ನಾಟ್ಯ ಪ್ರಸ್ತುತಿ ಯೋನ್ನು ಶುಭಾಶಯ ಜೈನ್ ರವರ ಕಾಯದಾನ ಪ್ರಸಂಗದ ಸಾಹಿತ್ಯಕ್ಕೆ ಯುವ ಬಾಗವತರಾದ ಅಮೃತ ಅಡಿಗ ಅವರ ಸಿರಿ ಕಂಠದಲ್ಲಿ ಕೌಶಿಕ್ ರಾವ್ ಹಾಗೂ ಕೌಶಲ್ ರಾವ್ ಅವರ ಚೆಂಡೆಮದ್ದಳೆ ಸಹಕಾರದೊಂದಿಗೆ ಪ್ರಸ್ತುತ ಪಡಿಸಲಾಗಿದ್ದು ಇದರ ಸಯೋಜನೆಯ ಜವಾಬ್ದಾರಿಯನ್ನು ಸುದೇಶ್ ಜೈನ್ ಮಕ್ಕಿಮನೆ ಹಾಗೂ ಸಂಕಲನವನ್ನು ನಿಶಾಲ್ ವಾಮಂಜೂರು ಹಾಗೂ ಸುಮಂತ್ ಮಂಗಳೂರು ಇವರು ಮಾಡಿರುತ್ತಾರೆ
ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಯಕ್ಷೋಲ್ಲಾಸ ನಾಟ್ಯ ಪ್ರಸ್ತುತಿಯ ವಿಡಿಯೋ ಬಿಡುಗಡೆ
ಮಂಗಳೂರು :- ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿ ಯಲ್ಲಿ (23/6/2020 ) ಮಂಗಳವಾರ ಯಕ್ಷಗಾನ ಕ್ಷೇತ್ರದ ಹಿರಿಯ ತಜ್ಞ, ವಿಮರ್ಶಕ , ಖ್ಯಾತ ವಾಗ್ಮಿ
ಡಾ. ಪ್ರಭಾಕರ ಜೋಶಿ ಮಕ್ಕಿಮನೆ ಕಲಾವೃಂದ ಯೊಟ್ಯೋಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದರು.
ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಸಾಹಿತಿ ಪೊಳಲಿ ನಿತ್ಯಾನಂದ ಕಾರಂತ , ಸುಧಾಕರ ರಾವ್ ಪೇಜಾವರ, ರತ್ನಾಕರ ಜೈನ್ ಮಂಗಳೂರು, ಜನಾರ್ದನ ಹಂದೆ, ಸನತ್ ಕುಮಾರ್ ಜೈನ್, ಮಾಧವ ಎಂ .ಎಸ್ ಶಿವಮೊಗ್ಗ, ವಿಜೇಶ್ ದೇವಾಡಿಗ ಮಂಗಳಾದೇವಿ, ಸುದೇಶ್ ಜೈನ್ ಮಕ್ಕಿಮನೆ, ಪ್ರೀತಾ ಮಾಧವ, ಸಂದೀಪ್ ಮಂಗಳೂರು, ನಿಶಾಲ್ ವಾಮಂಜೂರು ಉಪಸ್ಥಿತರಿದ್ದರು.
ಸುದೇಶ್ ಜೈನ್ ಮಕ್ಕಿಮನೆ ಸ್ವಾಗತಿಸಿದರು , ವಿಜೇಶ್ ದೇವಾಡಿಗ ನಿರೂಪಿಸಿದರು, ಮಾಧವ ಎಂ ಎಸ್ ವಂದಿಸಿದರು.

Back to top button