ಪಾಸಿಟಿವ್ ವರದಿ ನೆಗೆಟಿವ್ ಎಂದು ಹೇಳಿದ ಸಿಬ್ಬಂದಿ: ಮನೆಗೆ ಹೊರಟವನ್ನು ಹುಡುಕಿಕೊಂಡು ಬಂದರು
ಆಸ್ಪತ್ರೆ ಸಿಬ್ಬಂದಿ ಅವಾಂತರ
ಮನೆಗೆ ಮರುಳುತ್ತಿದ್ದವನಿಗೆ ಶಾಕ್
ಕೊನೆಗೂ ಪತ್ತೆಯಾದ ಯಲ್ಲಾಪುರದ ಸೋಂಕಿತ
ಭಟ್ಕಳ: ಕುವೈತ್ ನಿಂದ ಬಂದು ಮಂಗಳೂರಿನಲ್ಲಿ ಏಳು ದಿನಗಳ ಕ್ವಾರಂಟೈನ್ ಮುಗಿಸಿ ಮನೆ ಹಾದಿ ಹಿಡಿದ 29 ವರ್ಷದ ಯಲ್ಲಾಪುರದ ವ್ಯಕ್ತಿಗೆ ಕಾರಣ ಸೋಂಕು ತಗುಲಿರುವುದು ದೃಢಪಟ್ಟಿದೆ . ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳ ಅಚಾತುರ್ಯ ಹಾಗೂ ನಿರ್ಲಕ್ಷತನದಿಂದ ಪಾಸಿಟಿವ್ ವರದಿಯನ್ನು ನೆಗೆಟಿವ್ ಎಂದು ತಿಳಿದು ಕೊರೋನಾ ಸೋಂಕಿತ ವ್ಯಕ್ತಿಯನ್ನು ಮನೆಗೆ ಕಳುಹಿಸಿದ ಘಟನೆ ಎಲ್ಲೆಡೆ ಆಕ್ರೋಶಕ್ಕೆ ಒಳಗಾಗಿದೆ.
ಜಿಲ್ಲಾ ವೈದ್ಯಾಧಿಕಾರಿಗಳ ಸೂಚನೆ ಮೇರೆಗೆ ಸದರಿ ಸೋಂಕಿತ ವ್ಯಕ್ತಿಯನ್ನು ಭಟ್ಕಳದಲ್ಲಿಯೇ ತಡೆಹಿಡಿದು ವಶಕ್ಕೆ ಪಡೆಯಲಾಗಿದೆ . ಮಂಗಳೂರಿನಿಂದ ಕಾರಿನಲ್ಲಿ ಹೊರಟ ಈ ಸೊಂಕಿತ ವ್ಯಕ್ತಿಯೊಂದಿಗೆ ಇಬ್ಬರು ಇದ್ದರು ಎಂದು ತಿಳಿದು ಬಂದಿದ್ದು , ಭಟ್ಕಳದಿಂದ ಮುಂದಕ್ಕೆ ಪ್ರಯಾಣ ಬೆಳೆಸಿರುವ ಈ ಇಬ್ಬರನ್ನು ಪತ್ತೆ ಹಚ್ಚಲು ಪೊಲೀಸರು ನಡೆಸಿರುವ ಪ್ರಯತ್ನ ಕೊನೆಗೂ ಸಫಲವಾಗಿದೆ
ಈತ ಜೂನ್ 17 ರಂದು ಕುವೈತ್‍ನಿಂದ ಮಂಗಳೂರಿಗೆಬಂದಿದ್ದು, ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನೀಡಿ, ನಂತರ ಹೋಟೆಲ್ ಕ್ಯಾರೆಂಟೈನ್‍ನಲ್ಲಿದ್ದ ಎನ್ನಲಾಗಿದೆ. ಏಳು ದಿನಗಳ ಕ್ವಾರಂಟೈನ್ ಪೂರ್ಣಗೊಂಡ ನಂತರ ಹೋಟೆಲ್ ಮ್ಯಾನೇಜರ್ ಬಂದು ನಿಮ್ಮ ವರದಿ ನೆಗೆಟಿವ್ ಬಂದಿದೆ ನೀವು ಮನೆಗೆ ಹೋಗಬಹುದು ಎಂದು ತಿಳಿಸಿದ್ದಾರೆ. ನಂತರ ಆಸ್ಪತ್ರೆಯ ಸಿಬ್ಬಂದಿ ಆ ಯುವಕ ಕೈಗೆ ಹೋಂ ಕ್ವಾರೆಂಟೈನ್ ಮುದ್ರೆಯನ್ನು ಹಾಕಿ ಮನೆಗೆ ಹೋಗಲು ಅನುಮತಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಹೋಟೆಲ್ ನಲ್ಲಿ ಇತರ ಇಬ್ಬರು ವ್ಯಕ್ತಿಗಳನ್ನು ಸಹ ಕ್ಯಾರೆಂಟೈನ್ ನಿಂದ ಮನೆಗೆ ಹೋಗಲು ಅನುಮತಿ ನೀಡಲಾಗಿದೆ,
ನಂತರ ಇಬ್ಬರು ವ್ಯಕ್ತಿಗಳೊಂದಿಗೆ ಕಾರಿನ ಮೂಲಕ ಮನೆಯತ್ತ ಹೊರಟಿದ್ದಾನೆ .ಈ ನಡುವೆ ಮಂಗಳೂರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಣ್ಣ ತಪ್ಪಿನಿಂದ ನೆಗೆಟಿವ್ ಎಂದು ತಿಳಿದಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ವೇಳೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ದೂರವಾಣಿಯಲ್ಲಿ ಸೋಂಕಿತ ವ್ಯಕ್ತಿಯನ್ನು ಸಂಪರ್ಕಿಸುವ ಪ್ರಯತ್ನ ನಡೆದಿದೆ . ಆದರೆ ಅದು ಪ್ರತಿಕ್ರಿಯಿಸದೇ ಇದ್ದಾಗ ಉತ್ತರ ಕನ್ನಡ ಜಿಲ್ಲೆ ವೈದ್ಯಾಧಿಕಾರಿಗಳಿಗೂ ಈ ಸಂಬಂಧ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಆತ ಮೊಬೈಲ್ ಗೆ ಸಂದೇಶವನ್ನು ಕಳುಹಿಸಿ ನೀವು ಎಲ್ಲಿ ಇದ್ದೀರೋ ಅಲ್ಲಿಯೇ ಪ್ರಯಾಣವನ್ನು ಸ್ಥಗಿತಗೊಳಿಸಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಲಾಗಿದೆ .ಅಷ್ಟರಲ್ಲಾಗಲೇ ಭಟ್ಕಳದವರೆಗೆ ಬಂದಿದ್ದ ಸೋಂಕಿತ ವ್ಯಕ್ತಿಯು ತನಗೆ ಬಂದಿದ್ದ ಮೊಬೈಲ್ ಸಂದೇಶವನ್ನು ಕಂಡು ಭಟ್ಕಳ ಸರಕಾರಿ ಆಸ್ಪತ್ರೆಗೆ ತೆರಳಿದ್ದ. ಅಲ್ಲಿ ಸೋಂಕಿತ ವ್ಯಕ್ತಿಯನ್ನು ಚಿಕಿತ್ಸೆಗೆ ಕಳುಹಿಸುವ ಪ್ರಯತ್ನ ನಡೆಸುತ್ತಿರುವಾಗಲೇ ಆತನೊಂದಿಗೆ ಬಂದಿದ್ದ ಇನ್ನಿಬ್ಬರು ಕಾರಿನೊಂದಿಗೆ ಮುಂದಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಇಬ್ಬರನ್ನು ಭಟ್ಕಳ ಪೊಲೀಸರು ಪತ್ತೆ ಹಚ್ಚಲಾಗಿದ್ದು ಓರ್ವ ವ್ಯಕ್ತಿ ಶಿವಮೊಗ್ಗ ಮತ್ತು ಇನ್ನೋರ್ವ ವ್ಯಕ್ತಿಯನ್ನು ಕಾನ್ಪುರದಲ್ಲಿ ಕ್ವಾರಂಟೈನ್ ಗೆ ಒಪ್ಪಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
[sliders_pack id=”1487″]