ಭಟ್ಕಳ - 3
ಶಿರಸಿ - 1
ಜೋಯ್ಡಾ - 1
ಕಾರವಾರ: ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಅಬ್ಬರಿಸುತ್ತಿದ್ದ ಕರೊನಾ ಇಂದು ಸ್ವಲ್ಪ ತಣ್ಣಗಾಗಿದೆ. ಜಿಲ್ಲೆಯ ವಿವಿಧೆಡೆ ಇಂದು ಒಟ್ಟು ಐದು ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಕಳೆದ ಎರಡು ಮೂರುದಿನಗಳಿಂದ ದಾಖಲಾಗುತ್ತಿದ್ದ ಗರಿಷ್ಠ ಪ್ರಕರಣ ನೋಡಿ ಸಾರ್ವಜನಿಕರು ಕಂಗಾಲಾಗಿದ್ದರು. ಆದ್ರೆ, ಇಂದು ಸ್ವಲ್ಪಮಟ್ಟಿಗೆ ನಿಟ್ಟುಸಿರುಬಿಡುವಂತಾಗಿದೆ. ಭಟ್ಕಳ ತಾಲೂಕಿನಲ್ಲಿ ಮೂರು ಪ್ರಕರಣ ದಾಖಲಾಗಿದ್ದರೆ, ಶಿರಸಿ ಹಾಗು ಜೋಯ್ಡಾದಲ್ಲಿ ತಲಾ ಒಂದು ಪ್ರಕರಣ ಕಾಣಿಸಿಕೊಂಡಿದೆ ಎನ್ನಲಾಗಿದೆ. ಭಟ್ಕಳದಲ್ಲಿ ವಿಜಯವಾಡದಿಂದ ಮರಳಿದ 13 ವರ್ಷದ ಬಾಲಕಿ, 10 ವರ್ಷದ ಬಾಲಕ ಹಾಗು 34 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಉಳಿದಂತೆ ಕುಮಟಾ ಮತ್ತು ಅಂಕೋಲಾದಲ್ಲಿ ಇಂದು ಯಾವುದೇ ಕರೊನಾ ಪ್ರಕರಣ ದೃಢಪಟ್ಟಿಲ್ಲ. ಕುಮಟಾ, ಮತ್ತು ಅಂಕೋಲಾದಲ್ಲಿ ಕಳೆದ ಮರ್ನಾಲ್ಕು ದಿನಗಳಿಂದ ಕರೊನಾ ಸೋಂಕು ಆತಂಕ ಹುಟ್ಟಿಸಿತ್ತು. ಆದ್ರೆ, ಇಂದು ಎರಡೂ ತಾಲೂಕಿನಲ್ಲಿ ಕರೊನಾ ಸ್ವಲ್ಪ ಬ್ರೇಕ್ ನೀಡಿದಂತಿದೆ. ಬೆಂಗಳೂರಿನಿ0ದ ಬಂದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಶಿರಸಿಯಲ್ಲಿ ಆತಂಕ ಹೆಚ್ಚಿಸಿದ್ದು, ಮರಾಠಿಕೊಪ್ಪದ ಆರು ಮನೆ ಮತ್ತು ಖಾಸಗಿ ಆಸ್ಪತ್ರೆಯೊಂದವನ್ನು ಸೀಲ್ಡೌನ್ ಮಾಡಲಾಗಿದೆ ಎನ್ನಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
[sliders_pack id=”1487″]