ಮುಂದುವರಿದ ಕೊರನಾ ಆರ್ಭಟ: ಇಂದು 33 ಪ್ರಕರಣ ದಾಖಲು?

ಭಟ್ಕಳ: 17
ಕುಮಟಾ: 2
ಹೊನ್ನಾವರ: 2
ಶಿರಸಿ: 2
ಅಂಕೋಲಾ: 1
ಕುಮಟಾದಲ್ಲಿ ಮಧ್ಯಾಹ್ನದಿಂದ ಲಾಕ್‌ಡೌನ್

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿ ಇಂದು 33 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ ಎನಂಬ ಮಾಹಿತಿ ಬಂದಿದೆ. ಭಟ್ಕಳದಲ್ಲಿ ಸೋಂಕು ಗಗನಮುಖಿಯಾಗಿದ್ದು 17 ಪ್ರಕರಣ ಕಾಣಿಸಿಕೊಂಡಿದೆ. ಕಾರವಾರದ ಐವರಲ್ಲಿ ಸೋಂಕು ದೃಢಪಟ್ಟಿದೆ. ಕುಮಟಾ 2, ಹೊನ್ನಾವರ 2, ಹಳಿಯಾಳ, ಹಾಗೂ ಶಿರಸಿಯಲ್ಲಿ ತಲಾ 2 ಪ್ರಕರಣ ಮತ್ತು ಅಂಕೋಲಾ, ಮುಂಡಗೋಡ, ಜೋಯಿಡಾದಲ್ಲಿ ತಲಾ 1 ಪ್ರಕರಣ ದೃಢಪಟ್ಟ ಮಾಹಿತಿ ಬಂದಿದೆ.

ಹೊನ್ನಾವರದಲ್ಲಿ ಮತ್ತಷ್ಟು ಆತಂಕ
ಹೊನ್ನಾವರ: ತಾಲೂಕಿನ ಕರ್ಕಿ ಮತ್ತು ಹಳದೀಪುರದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕರ್ಕಿ ಮೂಲದ ನೌಕರಿಯಲ್ಲಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ ಟೋಲ್ ಗೇಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಳದೀಪುರ ಮೂಲದ ವ್ಯಕ್ತಿಗೂ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

ಕುಮಟಾದಲ್ಲಿ ಇಂದು ಎರಡು ಪ್ರಕರಣ:ಮಧ್ಯಾಹ್ನದಿಂದ ಲಾಕ್ ಡೌನ್
ಕುಮಟಾ: ಕುಮಟಾ ತಾಲೂಕಿನಲ್ಲಿ ಹಳೆಮೀನುಮಾರುಕಟ್ಟೆ ಮೂಲದ ವ್ಯಕ್ತಿಯಲ್ಲಿ ಮತ್ತು ಗುಂದ ವ್ಯಕ್ತಿಯಲ್ಲಿ ಕರೊನಾ ದೃಢಪಟ್ಟಿದೆ. ಗುಂದ ಮೂಲದ ವ್ಯಕ್ತಿಯ ಅಣ್ಣ ಹುಬ್ಬಳ್ಳಿಗೆ ಹೋಗಿ ಬಂದಿದ್ದ ಎನ್ನಲಾಗಿದೆ. ಇದೇ ವೇಳೆ ಇಂದು ತಾಲೂಕು ಪಂಚಾಯತ್ ನಲ್ಲಿ ನಡೆದ ಜನಪ್ರತಿನಿಧಿಗಳು, ಸಾರ್ವಜನಿಕರು, ಉದ್ಯಮಿಗಳ ಸಭೆಯಲ್ಲಿ ನಾಳೆಯಿಂದ ಬೆಳಿಗ್ಗೆ ಆರುಗಂಟೆಯಿಂದ ಮಧ್ಯಾಹ್ನ 2 ಗಂಟೆಗೆ ವರೆಗೆ ಮಾತ್ರ ಅಂಗಡಿ ಮುಂಗಟ್ಟು ತೆರೆಯಲು ನಿರ್ಧರಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಿಗ್ಗೆ 5 ಗಂಟೆ ತನಕ ಲಾಕ್ ಡೌನ್ ನಿರ್ಧಾರ ಕೈಗೊಳ್ಳಲಾಗಿದೆ..

ವಿಸ್ಮಯ ನ್ಯೂಸ್ ಯೊಗೇಶ್ ಮಡಿವಾಳ ಕುಮಟಾ

ಅಂಕೋಲಾದಲ್ಲಿ ಮತ್ತೊಂದು ಕರೊನಾ ಪ್ರಕರಣ
ಅಂಕೋಲಾ : ಜಿಲ್ಲೆಯಲ್ಲಿ ಮಂಗಳವಾರ ಒಟ್ಟೂ 33 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 1 ಪ್ರಕರಣ ಅಂಕೋಲಾ ತಾಲೂಕಿಗೆ ಸಂಬAಧಿಸಿದ್ದು ಎನ್ನುವ ಸುದ್ದಿ ಹರಿದಾಡುತ್ತಿದೆ. ಇತ್ತಿಚೇಗೆ ಕಾರವಾರ ತಾಲೂಕಿನ ಅಮದಳ್ಳಿಯ ಅಂದಾಜು 68 ವಯಸ್ಸಿನ ಮಹಿಳೆಯೋರ್ವಳು ತನ್ನ ಅನಾರೋಗ್ಯದಿಂದ ಅಂಕೋಲಾ ತಾಲೂಕಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೊಳಪಟ್ಟಿದ್ದಳು ಎನ್ನಲಾಗಿದ್ದು, ತದ ನಂತರ ಅಂಕೋಲಾ ತಾಲೂಕಾ ಆಸ್ಪತ್ರೆಯವರು ಅವಳ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದರು ಎನ್ನಲಾಗಿದ್ದು, ಇಂದು ಬಂದ ಪರೀಕ್ಷಾ ವರದಿಯಲ್ಲಿ ಅಮದಳ್ಳಿಯ ಮಹಿಳೆಗೆ ಸೋಂಕು ಇದೆ ಎನ್ನುವುದು ಖಚಿತವಾದಂತಿದ್ದು ಸಂಜೆಯ ಹೆಲ್ತ್ಬುಲೆಟಿನ್‌ನಲ್ಲಿ ಧೃಡಪಡಬೇಕಿದೆ. ಮೊನ್ನೆಯಷ್ಟೇ ಇಂತಹುದೇ ಇನ್ನೊಂದು ಪ್ರಕರಣದಲ್ಲಿ ಅಂಕೋಲಾದಲ್ಲಿ 1 ಕೊರೊನಾ ಪಾಸಿಟಿವ್ ಎಂದು ಸುದ್ದಿ ಹಬ್ಬಿತ್ತಾದರೂ, ಬೆಂಗಳೂರಿನಲ್ಲಿ ಸೋಂಕು ಧೃಡಪಟ್ಟ ವ್ಯಕ್ತಿಯೋರ್ವರು ತಾಲೂಕಿನ ಮೂಲದವರಾಗಿರುವುದೇ ಅಂಕೋಲಾ ತಾಲೂಕಿನ ಪ್ರಕರಣಗಳ ಜೊತೆ ಈ ಸೋಂಕಿನ ಸುದ್ದಿಯೂ ಥÀಳಕು ಹಾಕಿಕೊಂಡಿತ್ತು ಎನ್ನುವುದನ್ನು ಸ್ಮರಿಸಬಹುದು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಈ ಕುರಿತ ಹೆಚ್ಚಿನ ಮಾಹಿತಿಯನ್ನು ಸಂಜೆ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ.

[sliders_pack id=”1487″]
Exit mobile version