ಶಿರಸಿ: 25
ಹಳಿಯಾಳ: 6
ಹೊನ್ನಾವರ: 2
ಮುಂಡಗೋಡು: 2
ಕುಮಟಾ: 2
ಕಾರವಾರ: 2
ಭಟ್ಕಳ: 2
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 40 ಕರೊನಾ ಪ್ರಕರಣ ದಾಖಲಾಗಿದೆ. ಶಿರಸಿಯಲ್ಲಿ ಅತಿಹೆಚ್ಚು 25 ಪ್ರಕರಣ ದೃಢಪಟ್ಟಿದೆ. ಉಳಿದಂತೆ ಹಳಿಯಾಳ 6, ಕಾರವಾರ 2 , ಹೊನ್ನಾವರ 2 ಮತ್ತು ಮುಂಡಗೋಡಿನಲ್ಲಿ 2 ಪ್ರಕರಣ ದೃಢಪಟ್ಟಿದೆ.
ಹೊನ್ನಾವರದಲ್ಲಿ ಎರಡು ಪ್ರಕರಣ ದಾಖಲು:
ಹೊನ್ನಾವರ ತಾಲೂಕಿನಲ್ಲಿ ಇಂದು ಎರಡು ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಬೆಂಗಳೂರಿನಿಂದ ಆಗಮಿಸಿದ ಹುಡಗೋಡಮುಟ್ಟಾದ 35 ವರ್ಷದ ಪುರುಷನಿಗೆ, ಮತ್ತು ಖರ್ವಾದ 37 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕುಮಟಾದಲ್ಲಿ ಇಂದು 3 ಪಾಸಿಟಿವ್: ಹೆಲ್ತ್ ಬುಲೆಟಿನ್‌ನಲ್ಲಿ ದಾಖಲಾಗಿದ್ದು 2 ಮಾತ್ರ:
ಕುಮಟಾದಲ್ಲಿ ಇಂದು ಮೂರು ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಖಾಸಗಿ ಆಸ್ಪತ್ರೆಯ ವೈದ್ಯರು, ಮತ್ತು ತಾಲೂಕಿನ ಬೆಟ್ಕುಳಿಯ 43 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇದೇ ವೇಳೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಮಟಾ ಮೂಲದ ಮಹಿಳೆಯೋರ್ವರಲ್ಲಿ ಸೋಂಕು ದೃಢಪಟ್ಟಿದ್ದು, ಇವರನ್ನು ಮಂಗಳೂರಿನ ಲಿಸ್ಟ್ ಗೆ ಸೇರಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಮಾರಿಕಾಂಬಾ ದೇವಾಲಯದ ಪತ್ರಿಕಾ ಪ್ರಕಟಣೆ:
ಶಿರಸಿ ಶ್ರೀ ಮಾರಿಕಾಂಬಾ ದೇವಾಲಯ ಕರೋನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ 94 ಜನ ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ನಿನ್ನೆ ಆರೋಗ್ಯ ಇಲಾಖೆ ನೀಡಿದ ವರದಿಯಲ್ಲಿ ನೆಗೇಟಿವ್ ಎಂದು ತಿಳಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ನಿನ್ನೆ ಪತ್ರಿಕಾ ಪ್ರಕಟಣೆ ನೀಡಲಾಗಿರುತ್ತದೆ. ಅಂತೆಯೇ ಇಂದು ದಿನಾಂಕ: 11-0-2020 ರಂದು ನೀಡಿದ ಪಟ್ಟಿಯಲ್ಲಿ ಬೆಳಿಗ್ಗೆ ಸುಮಾರು 10 ಘಂಟೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು 2 ನೇ ಪಟ್ಟಿಯನ್ನು ಪ್ರಕಟಿಸಿ 94 ಜನರಲ್ಲಿ 12 ಜನರಿಗೆ ಕರೋನಾ ವೈರಸ್ ತಗುಲಿದೆ ಎಂದು ದೃಢೀಕರಿಸಿ ಮುಂದಿನ ಕ್ರಮ ವಹಿಸುವಂತೆ ಸೂಚಿಸಿರುತ್ತಾರೆ. ಸದರಿ ಮಾಹಿತಿ ಹಾಗೂ ಈ ವರದಿಯನ್ನಾಧರಿಸಿ ಕರೋನಾ ವೈರಸ್ ಸೋಂಕಿತರೆAದು ಗುರುತಿಸಿದ ವ್ಯಕ್ತಿಗಳನ್ನು ಸುರಕ್ಷತೆ ಮತ್ತು ಚಿಕಿತ್ಸೆಗಾಗಿ ಕ್ವಾರಂಟೈನ್ ಹೌಸಗೆ ಕಳಿಸಲಾಗಿದೆ. ಇತರ ಸಿಬ್ಬಂದಿಗಳನ್ನು ಹೋಮ ಕ್ವಾರಂಟೈನಗೆ ಒಳಪಡಿಸಲಾಗಿದ್ದು ಮುಂದಿನ ಆದೇಶದವರೆಗೆ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಇಡೀ ದೇವಸ್ಥಾನದ ಆವರಣವನ್ನು ಸೆನೆಟೈಜ್ ಮಾಡಲಾಗಿದ್ದು ಯಾವುದೇ ರೋಗಾಣು ಹರಡದಂತೆ ಕ್ರಮವಹಿಸಲಾಗಿದೆ. ಶ್ರೀ ದೇವಿಯ ಭಕ್ತರು ಯಾವುದೇ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ. – ಶ್ದೇವಸ್ಥಾನದ ಅಧ್ಯಕ್ಷರು, ಡಾ. ವೆಂಕಟೇಶ. ಎಲ್. ನಾಯ್ಕ
ವಿವರವಾದ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್