ಮಾಹಿತಿ
Trending

ಉತ್ತಮ‌ ಫಲಿತಾಂಶ ದಾಖಲಿಸಿದ ಬಾಡ ಕಾಲೇಜು

ಕುಮಟಾ: ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು,ಬಾಡ 2019-20 ನೇ ಸಾಲಿನ ದ್ವಿತೀಯ
ಪಿಯುಸಿ ಫಲಿತಾಂಶದಲ್ಲಿ ಉತ್ತಮ‌ ಸಾಧನೆ ಮಾಡಿದೆ. ಪರೀಕ್ಷೆ ಬರೆದ 100 ವಿದ್ಯಾರ್ಥಿಗಳಲ್ಲಿ 88 ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದಾರೆ.ಕಾಲೇಜಿನ ಫಲಿತಾಂಶ 88% ಬಂದಿದೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 45 ವಿದ್ಯಾರ್ಥಿಗಳಲ್ಲಿ
37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 82.2 % ಫಲಿತಾಂಶ ಬಂದಿದೆ. ಇವರಲ್ಲಿ 07 ವಿದ್ಯಾರ್ಥಿಗಳು ಉನ್ನತ ಶ್ರೇಣಿ
ಪಡೆದಿದ್ದಾರೆ. 17 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ. ರಂಜಿತಾ ನಾಗೇಶ ಹಳ್ಳೇರ 566 (94.33 %)
ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ಪ್ರಥಮ ಮತ್ತು ಕಾಲೇಜಿಗೆ ದ್ವಿತೀಯ ಸ್ಥಾನವನ್ನೂ, ಸೌಮ್ಯ ಎಸ್ ಭಟ್ಟ 563
(93.83 %) ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ದ್ವಿತೀಯ ಮತ್ತು ಕಾಲೇಜಿಗೆ ತೃತೀಯ ಸ್ಥಾನವನ್ನೂ, ಪೂಜಾ ಜಿ
ನಾಯ್ಕ 547 (91.16 %) ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ತೃತೀಯ ಸ್ಥಾನವನ್ನೂ ಪಡೆದಿದ್ದಾರೆ. ಸ್ನೇಹಾ ಎಸ್ ಮೇಘಾ ಎನ್ ಪಟಗಾರ 524 (87.33 %) ಪದ್ಮಶ್ರೀ ಡಿ ನಾಯ್ಕ 516 (86 %) ಪ್ರಜ್ವಲ್ ಎಲ್ ಪಟಗಾರ 510 (85 %) ಇವರು ಕಲಾ ವಿಭಾಗದಲ್ಲಿ ಉನ್ನತ ಶ್ರೇಣಿ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 39 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 37 ವಿದ್ಯಾಥಿಗಳು ಉತ್ತೀರ್ಣರಾಗಿ 94.87 %
ಫಲಿತಾಂಶ ಬಂದಿದೆ. ಇವರಲ್ಲಿ 05 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದಿದ್ದಾರೆ.27 ವಿದ್ಯಾರ್ಥಿಗಳು ಪ್ರಥಮ ದರ್ಜೆ
ಪಡೆದಿದ್ದಾರೆ. ರಕ್ಷಿತಾ ಉಮೇಶ್ ನಾಯ್ಕ 580 (96.66 %) ಅಂಕಗಳೊಂದಿಗೆ ಕಾಲೇಜಿಗೆ ಮತ್ತು ವಾಣಿಜ್ಯ ವಿಭಾಗದಲ್ಲಿ
ಪ್ರಥಮ ಸ್ಥಾನವನ್ನು ಪಡೆದಿದ್ದರೆ, ಸಿಂಚನಾ ಎನ್ ನಾಯ್ಕ 556 (92,66 %) ಅಂಕಗಳೊಂದಿಗೆ ವಾಣಿಜ್ಯ ವಿಭಾಗಕ್ಕೆ
ದ್ವಿತೀಯ ಸ್ಥಾನವನ್ನೂ, ನಾಗರಾಜ ರಾಮ ಪಟಗಾರ ಮತ್ತು ಜ್ಯೋತಿ ನಾಗರಾಜ್ ನಾಯ್ಕ ಇವರು 534 (89 %)
ಅಂಕಗಳೊಂದಿಗೆ ವಾಣಿಜ್ಯ ವಿಭಾಗಕ್ಕೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.ಅಲ್ಲದೇ ಇದೇ ವಿಭಾಗದಲ್ಲಿ ರಂಜಿತಾ ಎಮ್
ಹರಿಕಂತ್ರ 518 (86.33 %) ಉನ್ನತ ಶ್ರೇಣಿ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 16 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು 14 ವಿದ್ಯಾರ್ಥಿಗಳು ಉತ್ತೀರ್ಣರಾಗಿ 87.5 %
ಫಲಿತಾಂಶ ಬಂದಿದೆ.ಚಂದನಾ ಜಿ ಹರಿಕಂತ್ರ 523 (87.16 %) ವಿಜ್ಞಾನ ವಿಭಾಗಕ್ಕೆ ಪ್ರಥಮ ಸ್ಥಾನವನ್ನೂ, ಸ್ಪೂರ್ತಿ ರಾಮ
ಹರಿಕಾಂತ 510 (85 %) ವಿಜ್ಞಾನ ವಿಭಾಗಕ್ಕೆ ದ್ವಿತೀಯ ಸ್ಥಾನವನ್ನೂ,ಹೇಮಾ ಎಸ್ ಪಟಗಾರ 502 (83.66 %)
ವಿಜ್ಞಾನ ವಿಭಾಗಕ್ಕೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ವಿಸ್ಮಯ ನ್ಯೂಸ್ ನಾಗೇಶ್ ದಿವಗಿ ,ಕುಮಟಾ

[sliders_pack id=”1487″]

Back to top button