ಮಾಹಿತಿ
Trending

ಭಟ್ಕಳ ಹನುಮಾನನಗರದ ವಿದ್ಯಾರ್ಥಿನಿಯರ ಉತ್ತಮ ಸಾಧನೆ

ಭಟ್ಕಳ: ಇಲ್ಲಿನ ಹನುಮಾನನಗರದ ಮೂವರು ವಿದ್ಯಾರ್ಥಿನಿಯರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದು, ಓರ್ವ ವಿದ್ಯಾರ್ಥಿನಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ.
ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯಶಸ್ವಿನಿ ರಾಮಾ ನಾಯ್ಕ ಶೇ 90 (539) ಅಂಕಗಳನ್ನು ಪಡೆದಿದ್ದಾಳೆ. ಸಿದ್ದಾರ್ಥ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೂಜಾ ಪ್ರಕಾಶ್ ನಾಯ್ಕ ಶೇ 88.5 (531) ಫಲಿತಾಂಶ ಸಾಧಿಸಿದ್ದಾಳೆ. ಬೈಂದೂರು ಸರ್ಕಾರಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರಂಜಿತಾ ಮಂಜುನಾಥ ನಾಯ್ಕ ಕೂಡ ಶೇ 95 (570) ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದು, ಲೆಕ್ಕಶಾಸ್ತ್ರದಲ್ಲಿ 100ಕ್ಕೆ 100 ಅಂಕ ಗಳಿದ್ದಾಳೆ.
ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವಿದ್ಯಾ ಅಣ್ಣಪ್ಪ ನಾಯ್ಕ ಶೇ 74.83ರಷ್ಟು (449) ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಇನ್ನು, ಸಿದ್ದಾರ್ಥ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ಪಿಯು ವಿದ್ಯಾರ್ಥಿನಿ ಪೂಜಾ ಲಚ್ಮಯ್ಯ ನಾಯ್ಕ ಶೇ 89 (532)ರಷ್ಟು ಫಲಿತಾಂಶ ಸಾಧಿಸಿದ್ದಾಳೆ.
ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ವಿದ್ಯಾರ್ಥಿನಿಯರು ಊರಿನ ಗೌರವ ಹೆಚ್ಚಿಸಿದ್ದು, ಇದಕ್ಕಾಗಿ ಊರಿನ ಮುಖಂಡರು, ನಾಮಧಾರಿ ಸಮಾಜದ ಪ್ರಮುಖರು, ಜೈಹನುಮಾನ್ ಯುವಕ ಮಂಡಳದ ಪದಾಧಿಕಾರಿಗಳು, ವಿದ್ಯಾರ್ಥಿಗಳ ಪಾಲಕರು, ಕಾಲೇಜಿನ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button