Follow Us On

Google News
ಮಾಹಿತಿ
Trending

ಪಿ.ಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಅವರ್ಸಾ ಕಾಲೇಜ್

ಅವರ್ಸಾ : ಅವರ್ಸಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2019-20ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದು, ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಿಂದ ಒಟ್ಟಾರೆಯಾಗಿ ಕಾಲೇಜಿನ ಫಲಿತಾಂಶ ಶೇ 80 ದಾಖಲಾಗಿದೆ.
ವಿಜ್ನಾನ ವಿಭಾಗ : ವೈಷ್ಣವಿ ಅಶೋಕ ರೇವಣಕರ 96% ಫಲಿತಾಂಶಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನಗಳಿಸಿದ್ದಲ್ಲದೇ ಅಂಕೋಲಾ ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದ್ದಾಳೆ. ವೀಣಾ ವಿ. ನಾಯ್ಕ (86.83%) ದ್ವಿತೀಯ ಹಾಗೂ ಅನಿಕೇತ ನಾಯ್ಕ ( 86.16%) ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು ಫಲಿತಾಂಶ 92% ದಾಖಲಾಗಿದೆ.
ವಾಣಿಜ್ಯ ವಿಭಾಗ : ಪ್ರಗತಿ ಚಂದ್ರಕಾಂತ ನಾಯ್ಕ (92.5%) ಪ್ರಥಮ, ರೋಜಾ ಫಾಲ್ಗುಣ ಗೌಡ (85.33%) ದ್ವಿತೀಯ ಹಾಗೂ ಸ್ನೇಹಾ ವಿ,ಭಟ್ಟ (84.8%) ತೃತೀಯ ಸ್ಥಾನ ಗಳಿಸಿದ್ದು, ಒಟ್ಟು ಫಲಿತಾಂಶ ಶೇ79 ಆಗಿರುತ್ತದೆ.
ಕಲಾ ವಿಭಾಗ : ವೈಷ್ಣವಿ ರವಿಕಾಂತ ತಾಂಡೇಲ (86.16%)ಪ್ರಥಮ , ಸವಿತಾ ಮೋಹನ ಗೌಡ (79.83%) ದ್ವಿತೀಯ ಹಾಗೂ ಅಶ್ವಿನಿ ಆರ್ ಗೌಡ (68.83%) ತೃತೀಯ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗಳಿಗೆ ಕಾಲೇಜು ಅಭಿವೃಧ್ಧಿ ಸಮಿತಿಯವರು, ಪ್ರಾಂಶುಪಾಲರು,ಉಪನ್ಯಾಸಕ ವೃಂದದವರು, ಬೋಧಕೇತರ ಸಿಬ್ಬಂದಿಗಳು ಹಾಗೂ ಊರ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button