ಮಾಹಿತಿ
Trending

ಬೇಡಿಕೆ ಈಡೇರದಿದ್ದಲ್ಲಿ ಅಸಹಕಾರ ಚಳುವಳಿ

ಅಂಗನವಾಡಿ ನೌಕರರ ಸಂಘದಿಂದ ಮನವಿ.
ಮನವಿ ಸ್ವೀಕರಿಸಿದ ಅಂಕೋಲಾ ತಹಶೀಲ್ದಾರ್ ಉದಯ ಕುಂಬಾರ.

[sliders_pack id=”1487″]

ಅಂಕೋಲಾ: ತಾಲೂಕಾ ಅಂಗನವಾಡಿ ನೌಕರರ ಸಂಘದ ವತಿಯಿಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಿಗೆ ತಹಶೀಲ್ದಾರ್ ಅಂಕೋಲಾರವರ ಮೂಲಕ ಮನವಿ ಸಲ್ಲಿಸಲಾಯಿತು.
ಅಂಗನವಾಡಿ ನೌಕರರಿಗೆ ಮೇಲ್ವಿಚಾರಕ ಹುದ್ದೆ ಸಿಗಬೇಕು ಮತ್ತು ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದಂತ ಜುಲೈ 13ರಿಂದ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಕಛೇರಿ ಹಾಗೂ ಜುಲೈ 14ರಿಂದ ಸಿ.ಡಿ.ಪಿ.ಓ ಕಛೇರಿ ಎದುರು ಪ್ರತಿಭಟನೆಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲಾಗುತ್ತಿದೆ. ಒಂದೊಮ್ಮೆ ತಮ್ಮ ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ಅಗಸ್ಟನಿಂದ ಅಸಹಕಾರ ಚಳವಳಿ ಆರಂಭಿಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಮೀನಾಕ್ಷಿ ನಾಯಕ, ಕಾರ್ಯದರ್ಶಿ ಮಂಕಾಳಿ ಗೌಡ, ಖಜಾಂಚಿ ಮಂಗಲಾ ಬಾನಾವಳಿ, ಸಹ ಕಾರ್ಯದರ್ಶಿಗಳಾದ ಪವಿತ್ರಾ ಆಗೇರ್ ಲೀಲಾ ನಾಯ್ಕ ಮತ್ತು ಸಿ.ಆಯ್.ಟಿ.ಯು ತಾಲೂಕಾಧ್ಯಕ್ಷ ಎಚ್.ವಿ. ನಾಯಕ ಉಪಸ್ಥಿತರಿದ್ದು ಮನವಿ ನೀಡಿದರು.
ತಹಶೀಲ್ದಾರ್ ಉದಯ ಕುಂಬಾರ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿಗಳ ಮೂಲಕ ತಮ್ಮ ಬೇಡಿಕೆಗಳನ್ನು ಸಂಬಂಧಿಸಿದ ಸಚಿವರಿಗೆ ತಲುಪಿಸಲಾಗುವುದು ಎಂದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button