ಕುಮಟಾದಲ್ಲಿ 13 ಕರೊನಾ ಕೇಸ್ ಪತ್ತೆ?
ಹೊನ್ನಾವರದಲ್ಲಿ ಐವರಿಗೆ ಸೋಂಕು ದೃಢ
ಶಿರಸಿಯಲ್ಲಿ ಏಳು ಜನರಿಗೆ ಪಾಸಿಟಿವ್
ಅಂಕೋಲಾದಲ್ಲಿ ನಾಲ್ಕು ಮಂದಿಗೆ ಕರೊನಾ
ಕುಮಟಾ: ತಾಲೂಕಿನನಲ್ಲಿ ಇಂದು 13 ಕರೊನಾ ಕೇಸ್ ದಾಖಲಾಗಿದೆ. ©Copyright reserved by Vismaya tv ಗೋಕರ್ಣದ ಬೆಲೆಹಿತ್ಲದ 20 ವರ್ಷದ ಪುರುಷ, ಗೋಕರ್ಣದ 30 ವರ್ಷದ ಪುರುಷ, ಕತಗಾಲ್ ಕೊಡಂಬಳೆ 30 ವರ್ಷದ ಮಹಿಳೆ, ಧಾರೇಶ್ವರ, ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಕರಾವಳಿ ಕಾವಲು ಪಡೆಯ ಮೂರ್ನಾಲ್ಕು ಸಿಬ್ಬಂದಿಗೂ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಧಾರೇಶ್ವರ, ಕೊಡ್ಕಣಿ, ಹಂದಿಗೋಣ,ಸುವರ್ಣಗದ್ದೆಯಲ್ಲೂ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ.
ಹೊನ್ನಾವರದಲ್ಲಿ ಐವರಿಗೆ ಸೋಂಕು ದೃಢ:
ಹೊನ್ನಾವರ: ತಾಲೂಕಿನಲ್ಲಿ ಇಂದು ಒಟ್ಟು ಐದು ಕರೊನಾ ದೃಢಪಟ್ಟಿದೆ. ©Copyright reserved by Vismaya tv ಕೆಲವು ದಿನಗಳ ಹಿಂದೆ ವರದಿಯಾದ ಹೊನ್ನಾವರ ತಾಲೂಕಿನ ಸಾಲಕೋಡ ಕಾನಕ್ಕಿಯ ಮಹಿಳೆಯ ಸಂಪರ್ಕಕ್ಕೆ ಬಂದ 9 ವರ್ಷದ ಬಾಲಕನಿಗೆ ಮತ್ತು ಹಿಂದೆ ವರದಿಯಾದ ಐ ಆರ್ ಬಿ ಕಂಪನಿಯ ಸಂಪರ್ಕಕ್ಕೆ ಬಂದ 8 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಪಟ್ಟಣದ ಲಕ್ಷ್ಮೀ ನಾರಾಯಣ ನಗರದ 25 ವರ್ಷದ ಯುವಕನಿಗೆ ಹಾಗೂ 35 ವರ್ಷದ ಕಾಲೇಜು ಉಪಾನ್ಯಾಸಕಿಗೂ ಪಾಸಿಟಿವ್ ಬಂದಿದೆ. ಮತ್ತು ಬೆಂಗಳೂರಿನಿAದ ಆಗಮಿಸಿದ ಆರೋಳ್ಳಿ ಮುಗ್ವಾದ 68 ಪುರುಷ ಸೇರಿದಂತೆ ಒಟ್ಟು 5 ಜನರಲ್ಲಿ ಕರೋನಾ ದೃಢಪಟ್ಟಿರವುದಾಗಿ ತಿಳಿದು ಬಂದಿದೆ.
ಶಿರಸಿಯಲ್ಲಿ ಏಳು ಜನರಿಗೆ ಪಾಸಿಟಿವ್?
ಶಿರಸಿ: ತಾಲೂಕಿನಲ್ಲಿ ರವಿವಾರ ಏಳು ಜನರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ನೀರ್ನಳ್ಳಿ, ಹೆಬ್ಬತ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಲ್ಲದೆ, ಕಸ್ತೂರಿಬಾ ನಗರದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಅಂಕೋಲಾದಲ್ಲಿ ನಾಲ್ಕು ಮಂದಿಗೆ ಕರೊನಾ:
ಅಂಕೋಲಾ: ತಾಲೂಕಿನಲ್ಲಿ ಭಾನುವಾರ 4 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ©Copyright reserved by Vismaya tv ಹಾರವಾಡದ 4 ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಹಾರವಾಡದ ಪಿ.ಡಿ.ಓ ಈ ಹಿಂದೆ ಸೋಂಕಿಗೊಳಪಟ್ಟಿದ್ದು ಆತನ ಪ್ರಾಥಮಿಕ ಸಂಪರ್ಕದಿAದ ಮಗಳಲ್ಲೂ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಮೊಗಟಾ ಗ್ರಾ.ಪಂ ನ ಹರಿಜನಕೇರಿಯ ಹತ್ತಿರ ಈ ಹಿಂದೆ ಸೋಂಕು ಕಾಣಸಿಕೊಂಡ ಸೋಂಕಿತ ವ್ಯಕ್ತಿಯೋರ್ವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಇಬ್ಬರಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತಿದೆ. ಹುಲಿದೇವರವಾಡದ 60 ವಯಸ್ಸಿನ ಮಹಿಳೆಯೋರ್ವಳಲ್ಲಿ ಸಾಮಾನ್ಯ ಜ್ವರ(ಐ.ಎಲ್.ಐ) ಮಾದರಿಯ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ ಎನ್ನಲಾಗಿದೆ. ನಿಖರ ಅಂಕಿ-ಸAಖ್ಯೆಗಳು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‌ನಲ್ಲಿ ದೃಢಪಡಲಿದೆ.
ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ.
[sliders_pack id=”2570″]ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)