Important
Trending

ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ರಾಜಪಥದಲ್ಲಿ ನಡೆಯಲಿರುವ ಪಥಸಂಚಲನಕ್ಕೆ ಕಾರವಾರದ ವಿದ್ಯಾರ್ಥಿ ಆಯ್ಕೆ

ಕಾರವಾರ: ಗಣರಾಜ್ಯೋತ್ಸವದ ಅಂಗವಾಗಿ ದೇಹಲಿಯ ರಾಜಪಥದಲ್ಲಿ ನಡೆಯಲಿರುವ ಪಥಸಂಚಲನಕ್ಕೆ ನಗರದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್‌ಸಿಸಿ ಕೆಡೆಟ್ ಕೆ.ಚರ್ಚಿಲ್ ಆಯ್ಕೆಯಾಗಿದ್ದಾರೆ. ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುವ ಕೆ ಚರ್ಚಿಲ್ ಏನ್‌ಸಿಸಿ ನೆವಲ್ ಕೆಡೆಟ್ ಆಗಿದ್ದಾರೆ.

ಜನವರಿ 26 ರಂದು ದೇಹಲಿಯ ರಾಜಪಥದಲ್ಲಿ ನಡೆಯಲಿರುವ ಪಥÀಸಂಚನದಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಹಾಗೂ ಎನ್‌ಸಿಸಿ ಆಫೀಸರ್ ಸಬ್ ಲೆಪ್ಟಿನೆಂಟ್ ಗೀತಾ ತಳವಾರ್ ಶುಭಕೋರಿದ್ದಾರೆ. ಕಾರವಾರದ ನಿವಾಸಿಯಾಗಿರುವ ಜಾನ್ ಬೆಲ್ ಹಾಗೂ ಯಶೋಧ ಅವರ ಪುತ್ರರಾಗಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button