ಮಾಹಿತಿ
Trending

ಅಂಕೋಲಾದ ಇಂದಿನ‌ ಕರೊನಾ Updates

ಅಂಕೋಲಾ: ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶನಿವಾರ, ಕೋವಿಡ್-19 ಸೋಂಕಿನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲವಾದರೂ, ಶುಕ್ರವಾರ ಕಾಣಿಸಿಕೊಂಡ 2 ಕರೊನಾ ಪ್ರಕರಣಗಳೇ ಇಂದಿನ ಹೆಲ್ತಬುಲೆಟಿನ್‍ನಲ್ಲಿ ಧೃಡಪಟ್ಟಿದ್ದು, ತಾಲೂಕಿನ ಒಟ್ಟೂ ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆ ಆಗಿದೆ.
ಶುಕ್ರವಾರ ವರದಿಯಾಗಿದ್ದ 1 ಪ್ರಕರಣ ಹೊನ್ನೆಕೇರಿಯ ಮಹಿಳೆಗೆ ಸಂಬಂಧಿಸಿದ್ದು, ಅವಳಲ್ಲಿ ಕಾಣಿಸಿಕೊಂಡ ಸಾಮಾನ್ಯ ಜ್ವರ(ಐ.ಎಲ್.ಐ) ಪಾಸಿಟಿವ್ ಲಕ್ಷಣಗಳಿಂದ ಕೂಡಿತ್ತು ಎನ್ನಲಾಗಿತ್ತು. ಇನ್ನೊಂದು ಪ್ರಕರಣವು ಕೇಣಿ ವ್ಯಾಪ್ತಿಯ ವೃದ್ಧರೋರ್ವರಿಗೆ ಸಂಬಂಧಿಸಿದ್ದು, ಲಘು ಪಾಶ್ರ್ವವಾಯು ಲಕ್ಷಣಗಳಿಂದ ಕೂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೊಳಪಡಿಸಲು ಕಾರವಾರದ ಕ್ರಿಮ್ಸ್‍ಗೆ ದಾಖಲು ಪಡಿಸುವ ವೇಳೆ ಪರೀಕ್ಷಿಸಿದಾಗ ಪಾಸಿಟಿವ್ ಇರುವುದು ಪತ್ತೆಯಾಗಿತ್ತು ಎನ್ನಲಾಗಿದೆ. ಅವರನ್ನು ಈಗ ಕ್ರಿಮ್ಸ್ ತೀವ್ರನಿಗಾ ಘಟಕದಲ್ಲಿದ್ದು ಚಿಕಿತ್ಸೆಗೆ ಒಳಪಡಿಸಲಾಗಿದೆ.
ಓದುಗರ ಗಮನಕ್ಕೆ : ಸಾಮಾನ್ಯವಾಗಿ ಉತ್ತರಕನ್ನಡ ಜಿಲ್ಲೆಯ ಹೆಲ್ತಬುಲೆಟಿನ ಸಂಜೆಯ ವೇಳೆಗೆ ಪ್ರಕಟವಾಗುತ್ತಿದ್ದು, ತದನಂತರ ದಾಖಲಾಗುವ ಕರೊನಾ ಸಂಬಂಧಿತ ಅಂಕಿ-ಅಂಶಗಳು ಮಾರನೇ ದಿನದ ಹೆಲ್ತ ಬುಲೆಟಿನ್‍ನಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇರುತ್ತದೆ. ಇನ್ನಿತರ ಕಾರಣಗಳಿಂದಲೂ ಆಯಾ-ದಿನದ ಜಿಲ್ಲಾಮಟ್ಟದಲ್ಲಿ ತೋರಿಸಿದ ಅಂಕಿ-ಅಂಶ ಮತ್ತು ತಾಲೂಕಿನ ಸ್ಥಳೀಯ ಅಂಕಿ-ಅಂಶಗಳ ವರದಿಯಲ್ಲಿ ಚಿಕ್ಕಪುಟ್ಟ ಏರುಪೇರು ಕಾಣಿಸಬಹುದಾಗಿದೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button