Follow Us On

Google News
Big News
Trending

Chaitra Kundapura: ಕೋಟಿಕೋಟಿ ವಂಚನೆ: ಪ್ರಧಾನಿ ಮೋದಿ ತಾಯಿ ಹೆಸರು ಉಲ್ಲೇಖ: ಚೈತ್ರಾ ಕುಂದಾಪುರ್ ಸುಳ್ಳಿನ ಸರಮಾಲೆಯ ಆಡಿಯೋ ವೈರಲ್!

ಹಿಂದೂ ಕಾರ್ಯಕರ್ತೆ, ಚೈತ್ರಾ ಕುಂದಾಪುರ (Chaitra Kundapura) ಅವರ ಬಹುಕೋಟಿ ವಂಚನೆ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಶಾಸಕ ಸ್ಥಾನಕ್ಕೆ ಟಿಕೆಟ್ ಕೋಡಿಸುವುದಾಗಿ ನಂಬಿಸಿ, ಉದ್ಯಮಿಯೊಬ್ಬರಿಂದ ಬರೋಬ್ಬರಿ 5 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉಡುಪಿ ಮೂಲದ ಉದ್ಯಮಿ, ಬಿಲ್ಲವ ಮುಖಂಡ ಗೋವಿಂದಬಾಬು ಪೂಜಾರಿಗೆ ಚೈತ್ರಾ ಮೋಸಮಾಡಿದ್ದು, ಅವರಿಂದ ಕೋಟಿ ಕೋಟಿರೂಪಾಯಿ ವಂಚಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: SBI Recruitment 2023: ಉದ್ಯೋಗಾವಕಾಶ: 2 ಸಾವಿರ ಹುದ್ದೆಗಳು: 63 ಸಾವಿರದ ವರೆಗೆ ಮಾಸಿಕ ವೇತನ: ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ನೇಮಕಾತಿ: Apply Now

ಆಶ್ಚರ್ಯ ಅಂದರೆ 10 ತಿಂಗಳ ಹಿಂದೆಯೇ ಕೋಟಿ ಕೋಟಿ ರೂಪಾಯಿ ದೋಚುವ ಯೋಜನೆ ನಡೆದಿದೆಯಂತೆ. ಉದ್ಯಮಿ ಗೋವಿಂದ ಬಾಬು ನಂಬಿಸಲು ಚೈತ್ರ ಕುಂದಾಪುರ ಹಾಗೂ ತಂಡ ನಕಲಿ ನಾಯಕರನ್ನು ಸೃಷ್ಟಿ ಮಾಡಿದ್ದಾರೆ ಎನ್ನಲಾಗಿದೆ. ಚೈತ್ರಾ ಕುಂದಪುರ (Chaitra Kundapura) ಮತ್ತು ಅವರ ಸಂಗಡಿಗರು ಕೇಂದ್ರದ ನಾಯಕರು ಹಾಗೂ ಆರೆಸ್ಸೆಸ್ ಮುಖಂಡರ ಹೆಸರಲ್ಲಿ ಈ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಮದಿದೆ. ಇದೀಗ ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಅತಿಥಿಯಾಗಿದ್ದಾರೆ.

ಗೋವಿಂದ್ ಬಾಬು ಪೂಜಾರಿ ಜೊತೆಗೆ ಇರುತ್ತಿದ್ದ ಯುವಕ ಪ್ರಸಾದ್ ಬೈಂದೂರು ಜೊತೆ ಸಂಘದ ಪ್ರಚಾರಕ ವಿಶ್ವನಾಥ್ ಜೀ ಸಾವನ್ನಪ್ಪಿದ್ದಾರೆ ಅಂತ ನಂಬಿಸುತ್ತಿರುವ ಆಡಿಯೋ ಇದೀಗ ವೈರಲ್ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ತಾಯಿಯ ಹೆಸರನ್ನೂ ಕೂಡಾ ಉಲ್ಲೇಖಿಸಿ, ಚೈತ್ರಾ ಕುಂದಾಪುರ, ಸುಳ್ಳು ಹೇಳಿ ನಾಟಕ ಆಡುತ್ತಿರುವ ಮಾತುಗಳು, ಇದೀಗ ಎಲ್ಲೆಡೆ ವೈರಲ್ ಆಗಿದೆ. ಆಡಿಯೋದಲ್ಲಿ ಏನಿದೆ ಅಂತಾ ನೀವೇ ಕೇಳಿ..

ಚೈತ್ರಾ ಕುಂದಾಪುರ ಆಡಿಯೋ

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button