ಉತ್ತರಕನ್ನಡದಲ್ಲಿ ಇಂದು 59 ಜನರಲ್ಲಿ ಸೋಂಕು

110 ಮಂದಿ ಗುಣಮುಖರಾಗಿ ಬಿಡುಗಡೆ
177 ಮಂದಿಗೆ ಹೋಮ್ ಐಷೋಲೇಷನ್ ನಲ್ಲಿ ಚಿಕಿತ್ಸೆ

[sliders_pack id=”3498″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 59 ಜನರಲ್ಲಿ ಸೋಂಕು ದೃಢಪಟ್ಟಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಕಾರವಾರದಲ್ಲಿ 31, ಅಂಕೋಲಾ 1, ಕುಮಟಾ 5, ಹೊನ್ನಾವರ 7, ಭಟ್ಕಳ 8, ಶಿರಸಿ 3, ಯಲ್ಲಾಪುರ 3, ಮುಂಡಗೋಡ 4, ಹಳಿಯಾಳದಲ್ಲಿ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದೇ ವೇಳೆ ಇಂದು 110 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಾರವಾರದಲ್ಲಿ 11, ಮುಂಡಗೋಡಿನಲ್ಲಿ 37, ಹಳಿಯಾಳದಲ್ಲಿ 46, ಜೋಯ್ಡಾದಲ್ಲಿ 10 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇಂದು 59 ಪ್ರಕರಣ ದೃಢಪಟ್ಟ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3279ಕ್ಕೆ ಏರಿಕೆಯಾಗಿದೆ. 177 ಮಂದಿಗೆ ಹೋಮ್ ಐಷೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಮಟಾದಲ್ಲಿ ಐವರಿಗೆ ಸೋಂಕು ದೃಢ:

ಕುಮಟಾ: ತಾಲೂಕಿನ ಹೆಗಡೆಯ 49 ವರ್ಷದ ಪುರುಷ, ಹೆಗಡೆಯ 70 ವರ್ಷದ ಪುರುಷ, ಹೆಗಡೆಯ 39 ವರ್ಷದ ಪುರುಷ, ಧಾರೇಶ್ವರದ 53 ವರ್ಷದ ಪುರುಷ, ಕುಮಟಾ ಪಟ್ಟಣದ 31 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಕುಮಟಾ ಹೆಗಡೆಯ 49 ವರ್ಷದ ಪುರುಷನಲ್ಲಿ ಐಎಲ್‌ಐ ಮಾದರಿಯ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ ಇಬ್ಬರಿಗೆ ಟ್ರಾವೆಲ್ ಹಿಸ್ಟರಿ ಇದೆ. ಉಳಿದವರಲ್ಲಿ ಪ್ರಾಥಮಿಕ ಸಂಪರ್ಕದಿoದಲೇ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

ಇವರಲ್ಲಿ ಓರ್ವರು ಕೆಎಸ್‌ಆರ್‌ಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಕುಮಟಾದಲ್ಲಿ ಸೋಂಕಿತರ ಸಂಖ್ಯೆ 317ಕ್ಕೆ ಏರಿಕೆಯಾಗಿದ್ದು, ಮೂವರು ಹೋಮ್ ಐಷೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version