39 ಮಂದಿ ಗುಣಮುಖರಾಗಿ ಬಿಡುಗಡೆ
195 ಮಂದಿಗೆ ಹೋಮ್ ಐಷೋಲೇಷನ್
ಕಾರವಾರ: ಜಿಲ್ಲೆಯಲ್ಲಿ ಗುರುವಾರ 89 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 39 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕಾರವಾರದಲ್ಲಿ 21, ಅಂಕೋಲಾ 1, ಕುಮಟಾ 8, ಭಟ್ಕಳದಲ್ಲಿ 5, ಹೊನ್ನಾವರದಲ್ಲಿ 9, ಶಿರಸಿಯಲ್ಲಿ 2, ಮುಂಡಗೋಡಿನಲ್ಲಿ 9, ಹಳಿಯಾಳದಲ್ಲಿ 34 ಜನರಲ್ಲಿ ಸೋಂಕು ದೃಢಪಟ್ಟಿದೆ.
ಈವರೆಗೆ ಜಿಲ್ಲೆಯ 3368 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 2420 ಮಂದಿ ಗುಣಮುಖರಾಗಿದ್ದು, 33 ಮಂದಿ ಸಾವನ್ನಪ್ಪಿದ್ದಾರೆ. 720 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 195 ಮಂದಿ ಹೋಂ ಐಸೋಲೇಷನ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇಂದು ಒಟ್ಟು 39 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಹಳಿಯಾಳದ 14 , ಕಾರವಾರದ 7, ಹೊನ್ನಾವರ 2, ಶಿರಸಿಯ 4, ಯಲ್ಲಾಪುರ 3, ಮುಂಡಗೋಡ 9 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ವಿಸ್ಮಯ ನ್ಯೂಸ್ ಕಾರವಾರ