Focus News
Trending

ಹೊನ್ನಾವರದಲ್ಲಿ ಇಂದು 10 ಕರೊನಾ ಕೇಸ್ ದಾಖಲು

ಗ್ರಾಮೀಣ ಭಾಗದಲ್ಲೇ ಹೆಚ್ಚು ಪ್ರಕರಣ ದಾಖಲು
14 ಮಂದಿ ಗುಣಮುಖರಾಗಿ ಬಿಡುಗಡೆ

[sliders_pack id=”3498″]

ಹೊನ್ನಾವರ; ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹೊನ್ನಾವರ ತಾಲೂಕಿನಲ್ಲಿ ಸೋಮವಾರ 10 ಕರೊನಾ ಪಾಸಿಟಿವ್ ದೃಢಪಟ್ಟಿದೆ. ಪಟ್ಟಣದ ರಾಯಲಕೇರಿ ಅಂಬೇಡ್ಕರ್ ನಗರದ 58 ವರ್ಷದ ಪುರುಷ, 52 ವರ್ಷದ ಮಹಿಳೆ, 23 ವರ್ಷದ ಯುವತಿ, 32 ವರ್ಷದ ಮಹಿಳೆ, ಉದ್ಯಮ ನಗರದ 31 ವರ್ಷದ ಯುವಕ, ಹಳದಿಪುರದ 57 ವರ್ಷದ ಪುರುಷ, ಕಾಸರಕೋಡ ಮಲಬಾರ ಕೇರಿಯ 34 ವರ್ಷದ ಯುವಕ, ಸುರಕಟ್ಟ ತಮ್ಮಡಗಿಯ 29 ವರ್ಷದ ಯುವಕ, ಮೋಳ್ಕೋಡನ 47 ವರ್ಷದ ಪುರುಷ, 48 ವರ್ಷದ ಮಹಿಳೆ ಸೇರಿದಂತೆ ಇಂದು ತಾಲೂಕಿನಲ್ಲಿ 10 ಕರೋನಾ ಪಾಸಿಟಿವ್ ದಾಖಲಾಗಿದೆ.


ಇದೇ ವೇಳೆ ಇಂದು ತಾಲೂಕಾ ಆಸ್ಪತ್ರೆಯಿಂದ 14 ಮಂದಿ ಗುಣಮುಖರಾಗಿ ಮನೆಗೆ ತರಳಿದ್ದಾರೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಕೆಲ ಜನರು ಮುಂಜಾಗೃತಾ ಕ್ರಮಗಳನ್ನು ಪಾಲಿಸದೆ ಅನವಶ್ಯಕವಾಗಿ ತಿರುಗಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿಸ್ಮಯ ನ್ಯೂಸ್ , ಶ್ರೀಧರ್ ನಾಯ್ಕ, ಹೊನ್ನಾವರ

ಪ್ರಮುಖ ಸುದ್ದಿಯ ಲಿಂಕ್ ಗಳು ಇಲ್ಲಿದೆ, ಕ್ಲಿಕ್ ಮಾಡಿ ನೋಡಿ

Back to top button