ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಸೋಂಕು
ಕಸಬಾ ಗುಂಡಿಬೈಲ್ ನಲ್ಲೇ 8 ಕೇಸ್
ಹೊನ್ನಾವರ: ತಾಲೂಕಿನಲ್ಲಿ ಇಂದು 23 ಕರೊನಾ ಕೇಸ್ ದೃಢಪಟ್ಟಿದೆ. ಪಟ್ಟಣದ ಕಸಬಾ ಗುಂಡಿಬೈಲ್ ನ 21 ವರ್ಷದ ಯುವಕ, 61 ವರ್ಷದ ಮಹಿಳೆ, 72 ವರ್ಷದ ಪುರುಷ, 37 ವರ್ಷದ ಪುರುಷ, 32 ವರ್ಷದ ಮಹಿಳೆ, 5 ವರ್ಷದ ಬಾಲಕ, 68 ವರ್ಷದ ಪುರುಷ, 72 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಕೆಳಗಿನಪಾಳ್ಯದ 29 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇನ್ನು ಗ್ರಾಮೀಣ ಪ್ರದೇಶದಲ್ಲಿಯೂ ಕರೊನಾ ಆರ್ಭಟ ಮುಂದುವರೆದಿದ್ದು ಕರ್ಕಿ ತೊಪ್ಪಲಕೇರಿ 72 ವರ್ಷದ ಪುರುಷ, 65 ವರ್ಷದ ಮಹಿಳೆ, 34ವರ್ಷದ ಯುವಕ, ಕರ್ಕಿ 58 ವರ್ಷದ ಪುರುಷ, 40 ವರ್ಷದ ಮಹಿಳೆ, ಸೋನಾತಕೇರಿ 68 ವರ್ಷದ ಮಹಿಳೆ, ಮಠದಕೇರಿ 55 ವರ್ಷದ ಪುರುಷ, ಹಳದಿಪುರದ 47 ವರ್ಷದ ಮಹಿಳೆ, ಕಡತೋಕಾ 52 ವರ್ಷದ ಪುರುಷ, ಮುಗ್ವಾ ತನ್ಮಡಗಿಯ 70 ವರ್ಷದ ಪುರುಷ , ಬಂಕನಹಿತ್ತಲ್ 50 ವರ್ಷದ ಮಹಿಳೆ, 35 ವರ್ಷದ ಯುವಕ, ಕೆಳಗಿನ ಇಡಗುಂಜಿಯ 82 ವರ್ಷದ ಮಹಿಳೆ, ಜಲವಳ್ಳಿಯ 24 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.
ಒಟ್ಟಾರೆ ತಾಲೂಕಿನಲ್ಲಿ ಗುರುವಾರ 23 ಪ್ರಕರಣ ದಾಖಲಾಗಿದೆ. ಗಣೇಶ ಚೌತಿಯ ಸಂಭ್ರಮದ ಮಧ್ಯೆ ಕೊರೋನಾ ಆರ್ಭಟವು ಮುಂದುವರೆದಿದ್ದು, ಸಾರ್ವಜನಿಕರು ಜಾಗೃತಿ ವಹಿಸಬೇಕಿದೆ. ಈ ಕುರಿತ ಹೆಚ್ಚಿನ ಮತ್ತು ವಿವರವಾದ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬಂಧ ತೋರಿಸಲಾಗುವುದು
ಎರಡನೇಯ ಸಂಬಂಧವನ್ನು ತೋರಿಸಲಾಗುವುದು
ಮೊಬೈಲ್: 7848833568