ಹೊನ್ನಾವರದಲ್ಲಿ ಇಂದು ದಾಖಲಾದ ಕರೊನಾ ಕೇಸ್ ಎಷ್ಟು?

ತಾಲೂಕಿನಲ್ಲಿ‌ ಸೋಂಕಿತರ ಸಂಖ್ಯೆ 298ಕ್ಕೆ ಏರಿಕೆ
ಇಂದು ಐವರಲ್ಲಿ ಸೋಂಕು ಪತ್ತೆ

ಹೊನ್ನಾವರ: ಗಣೇಶ ಚತುರ್ಥಿಯ ಸಂಭ್ರಮದ ನಡುವೆಯೇ ತಾಲೂಕಿನಲ್ಲಿ ಕರೊನಾ ಹೆಚ್ಚುತ್ತಲೇ ಇದೆ. ಇಂದು ಐದು ಕರೊನಾ ಕೇಸ್ ದೃಢಪಟ್ಟಿದೆ.
ತಾಲೂಕಿನ ಮಂಕಿ ಭಾಗದಲ್ಲಿ 2, ಕಾಸರಕೋಡನಲ್ಲಿ 1, ಹಳದೀಪುರ 1, ಅನಿಲಗೋಡಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ಮಂಕಿಯ 42 ವರ್ಷದ ಪುರುಷ, 37 ವರ್ಷದ ಮಹಿಳೆ, ಕಾಸರಕೋಡಿನ 42 ವರ್ಷದ ಪುರುಷ, ಹಳದೀಪುರದ 52 ವರ್ಷದ ಮಹಿಳೆ, ಅನೀಲಗೋಡಿನ 30 ವರ್ಷದ ಯುವಕ ಸೇರಿ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇಂದು ಐದು ಕೇಸ್ ದೃಢಪಟ್ಟ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯದ 298ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ ನಿನ್ನೆ ಒಂಬತ್ತು ಪ್ರಕರಣ ದಾಖಲಾಗಿತ್ತು. ಎಲ್ಲಾ ಕೇಸ್ ಗಳು ಮಂಕಿ ಭಾಗದಲ್ಲಿ ದೃಢಪಟ್ಟಿತ್ತು.

ವಿಸ್ಮಯ ನ್ಯೂಸ್ , ಶ್ರೀಧರ್ ನಾಯ್ಕ ಹೊನ್ನಾವರ

Exit mobile version