50 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,751ಕ್ಕೆ ಏರಿಕೆ
ಭಟ್ಕಳದಲ್ಲಿ ಒಂದು ಸಾವು
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಂದು 133 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಕಾರವಾರ 12, ಅಂಕೋಲಾ 14, ಕುಮಟಾ 1, ಹೊನ್ನಾವರ 11, ಭಟ್ಕಳ 19, ಶಿರಸಿ 14, ಸಿದ್ದಾಪುರ 2, ಯಲ್ಲಾಪುರ 4, ಮುಂಡಗೋಡ 21, ಹಳಿಯಾಳ 26, ಜೋಯ್ಡಾದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಇದೇ ವೇಳೆ ಜಿಲ್ಲೆಯಾದ್ಯಂತ ವಿವಿಧ ಆಸ್ಪತ್ರೆಯಿಂದ ಶನಿವಾರ 50 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರ 10, ಅಂಕೋಲಾ 1, ಕುಮಟಾ 5, ಹೊನ್ನಾವರ 6, ಶಿರಸಿ 8, ಯಲ್ಲಾಪುರ 3, ಹಳಿಯಾಳದಲ್ಲಿ 17 ಮಂದಿ ಬಿಡುಗಡೆಯಾಗಿದೆ.
ಭಟ್ಕಳದಲ್ಲಿ ಒಂದು ಸಾವು:
ಭಟ್ಕಳದಲ್ಲಿ ಒಂದು ಸಾವಾಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಇಂದು 133 ಪ್ರಕರಣ ಪತ್ತೆಯಾದ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,751ಕ್ಕೆ ತಲುಪಿದೆ.
476 ಸೋಂಕಿತರಿಗೆ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಮಟಾದಲ್ಲಿ ಇಂದು ಎಲ್ಲೆಲ್ಲಿ ಕೇಸ್ ದಾಖಲು:
ಕುಮಟಾ: ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಬೆಂಬಿಡದೆ ಗರಿಷ್ಠ ಮಟ್ಟದಲ್ಲಿಯೇ ಕರೊನಾ ಸೋಂಕಿತ ಪ್ರಕರಣಗಳು ಕಂಡುಬರುತ್ತಿತ್ತು. ಆದರೆ ಇಂದು ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಕೇವಲ 2 ಸೋಂಕಿತ ಪ್ರಕರಣ ಮಾತ್ರ ಪತ್ತೆಯಾಗಿದೆ. ಕುಮಟಾದ ಮಾಸೂರಿನ 50 ವರ್ಷದ ಪುರುಷ ಹಾಗೂ ಕುಮಟಾದ 35 ವರ್ಷದ ಪುರುಷನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ವಿಸ್ಮಯ ನ್ಯೂಸ್, ಕಾರವಾರ
ಚಿಂತಿಸುವ ಅವಶ್ಯಕತೆ ಇಲ್ಲ, ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ
ಶ್ರೀ ಕೇರಳ, ಕರಾವಳಿ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು.
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ:-8884997762
( ಜಾಹೀರಾತು )