ಜಿಲ್ಲೆಯಲ್ಲಿoದು 103 ಕರೊನಾ ಕೇಸ್
68 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಓರ್ವ ಸಾವು
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗಳವಾರ 103 ಕರೊನಾ ಪ್ರಕರಣಗಳು ವರದಿಯಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಅಂಕೋಲಾ 11, ಕುಮಟಾ 4, ಕಾರವಾರ 6, ಹೊನ್ನಾವರ 9, ಭಟ್ಕಳ 8, ಯಲ್ಲಾಪುರ 1, ಮುಂಡಗೋಡು 6, ಹಳಿಯಾಳ 29, ಶಿರಸಿ 25, ಸಿದ್ದಾಪುರ 3, ಜೋಯ್ಡಾದಲ್ಲಿ ಓರ್ವನಿಗೆ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ, ಇಂದು ವಿವಿಧ ಆಸ್ಪತ್ರೆಯಿಂದ 68 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಓರ್ವ ಸಾವು
ಹಳಿಯಾಳದಲ್ಲಿ 25, ಕಾರವಾರದಲ್ಲಿ 3, ಅಂಕೋಲಾದಲ್ಲಿ 5, ಹೊನ್ನಾವರದಲ್ಲಿ 27, ಮುಂಡಗೋಡ 6 ಹಾಗು ಯಲ್ಲಾಪುರದಲ್ಲಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯ 5069 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 3811 ಮಂದಿ ಗುಣಮುಖರಾಗಿದ್ದಾರೆ. 1204 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಮುಂಡಗೋಡಿನಲ್ಲಿ ಕೊರೋನಾ ಸೋಂಕಿಗೆ ಓರ್ವ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 54ಕ್ಕೆ ಏರಿಕೆಯಾದಂತಾಗಿದೆ.
ಅoಕೋಲಾದಲ್ಲಿoದು 5 ಕೋವಿಡ್ ಕೇಸ್ : ಗುಣಮುಖ 12
ಅಂಕೋಲಾ : ತಾಲೂಕಿನ ಹಿಲ್ಲೂರು ವ್ಯಾಪ್ತಿಯಲ್ಲಿ 4, ಶಿರಕುಳಿಯಲ್ಲಿ 1 ಸೇರಿದಂತೆ ಮಂಗಳವಾರ ಒಟ್ಟೂ 5ಹೊಸ ಕೊವಿಡ್ ಕೇಸ್‌ಗಳು ದಾಖಲಾಗಿದೆ ಎನ್ನಲಾಗಿದೆ. ಇಂದು 187 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಸೋಂಕು ಮುಕ್ತರಾದ 12ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಹೋಮ್ ಐಸೋಲೇಶನ್‌ನಲ್ಲಿರುವ 9ಜನರು ಸೇರಿದಂತೆ ತಾಲೂಕಿನಲ್ಲಿ ಒಟ್ಟೂ 46ಸಕ್ರಿಯ ಪ್ರಕರಣಗಳಿವೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 784883356