![](http://i0.wp.com/vismaya24x7.com/wp-content/uploads/2020/09/FB_IMG_1599324466606.jpg?fit=720%2C778&ssl=1)
[sliders_pack id=”1487″]
ಶಿರಸಿ: ತಾಲೂಕಿನ ಶಿರಸಿ- ಕುಮಟಾ ರಸ್ತೆಯ ಹತ್ತರಗಿ ಕ್ರಾಸ್ ಬಳಿ ಕಾಡು ಕೋಣದ ಕೊಂಬನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸಮಿವುಲ್ಲಾ ಅಬ್ದುಲ್ ರೆಹಮಾನ್ ಸಾಬ್ ಎಂದು ತಿಳಿದು ಬಂದಿದೆ.
ಆರೋಪಿತ ಸಮೀವುಲ್ಲಾ ಹೆಗಡೆಕಟ್ಟಾ ಬಳಿಯವನಾಗಿದ್ದು, ಹತ್ತರಗಿ ಕ್ರಾಸ್ ಬಳಿ ಅಂದಾಜು 25 ಸಾವಿರ ರೂಪಾಯಿ ಮೌಲ್ಯದ ಕಾಡು ಕೋಣದ ಎರಡು ಕೊಂಬನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ.
ಹತ್ತಿರಗಿ ಕ್ರಾಸ್ ಬಳಿ ಖಚಿತವಾಗಿ ಅಕ್ರಮವಾಗಿ ಕಾಡು ಕೋಣದ ಕೊಂಬನ್ನು ಮಾರಾಟಕ್ಕೆ ಯತ್ನಿಸುತ್ತಿರುವ ಕುರಿತು ಖಚಿತವಾದ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿತನನ್ನು ಬಂಧಿಸಿದ್ದಾರೆ.
ವಿಸ್ಮಯ ನ್ಯೂಸ್ , ಶಿರಸಿ