Uttara Kannada
Trending

ದನಗಳ್ಳರನ್ನು ಹಿಡಿದ ಹೊನ್ನಾವರದ ಸ್ಥಳೀಯರು

ಹೊನ್ನಾವರ: ರಾತ್ರಿ ಸಮಯದಲ್ಲಿ ಆಕಳನ್ನು ಕದ್ದು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಸ್ಥಳೀಯರು ಹಿಡಿದು ಪೋಲಿಸರಿಗೆ ಒಪ್ಪಿಸಿದ ಘಟನೆ ಹೊನ್ನಾವರ ತಾಲೂಕಿನ ಮಾಗೋಡ ತೆಂಗಾರಿನಲ್ಲಿ ನಡೆದಿದೆ.

ಮಾಗೋಡಿನ ತೆಂಗಾರ್ ಹತ್ತಿರ ಬೆಳಗಿನ ಜಾವ ಸುಮಾರು 3 ಗಂಟೆಯ ಸುಮಾರಿಗೆ ಬುಲೇರೊ ವಾಹನದಲ್ಲಿ ಮೂವರು ದುಷ್ಕರ್ಮಿಗಳು ಅಕ್ರಮವಾಗಿ ಗೂಳಿಯನ್ನು ಸಾಗಿಸುತ್ತಿರುವಾಗ ಸ್ಥಳೀಯರು ಎಲ್ಲರಿ ಸೇರಿ ತಡೆ ಹಿಡಿದಿದ್ದಾರೆ. ಬಳಿಕ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ದಿನೇ ದಿನೇ ಗೋ ಕಳ್ಳತನ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪೋಲಿಸರು ತನಿಖೆ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button