ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿ ಆರಂಭದಿಂದಲೂ ಹಲವರಲ್ಲಿ ಕುತೂಹಲ ಮೂಡಿಸಿ, ಎಲ್ಲಡೆ ವೈರಲ್ ಆಗುತ್ತಿದ್ದ ಕೇರಳ ಮೂಲದ ಅರ್ಜುನ್ ಈತನ ಬೆಂಜ್ ಲಾರಿ ಕುರುಹು ಈ ವರೆಗೂ ಸರಿಯಾಗಿ ಪತ್ತೆಯಾಗದಿದ್ದರೂ, ಆತನ ವಾಹನದಲ್ಲಿ ತ್ತೆನ್ನಲಾದ ಜಲಾವ ನಾಟ ತುಂಡೊಂದು (ಕಟ್ಟಿಗೆ) ದೊರೆತಿದೆ.
ಮುಳುಗು ತಜ್ಞ ಈಶ್ವರ ಮಲ್ಪೆ ಪ್ರಕಾರ, ಶೋಧ ಕಾರ್ಯಾಚರಣೆ ವೇಳೆ, ನದಿಯಲ್ಲಿ ಪಲ್ಟಿಯಾದ ರೀತಿಯಲ್ಲಿ ವಾಹನವೊಂದರ ಚಕ್ರಗಳು ಕಂಡು ಬಂದಿದ್ದು, ಅದಕ್ಕೆ ಹಗ್ಗ ಕಟ್ಟಿ ಬಂದಿದ್ದರು. ಅದು ಅರ್ಜುನ್ ಇದ್ದ ಲಾರಿಯೇ ಅಥವಾ ಗ್ಯಾಸ್ ಟ್ಟಾಂಕರ್ ಕ್ಯಾಬಿನ್ ಅಥವಾ ಇತರೆ ವಾಹನದ್ದೇ ಎಂದು,ಅದನ್ನು ಮೇಲೆತ್ತಿದ ಬಳಿಕವಷ್ಟೇ ಸ್ಪಷ್ಟವಾಗಿ ತಿಳಿದು ಬರಬೇಕಿತ್ತು: ಸಂಜೆಯ ವೇಳೆಗೆ ಅವುಗಳನ್ನು ಮೇಲೆತ್ತುವ ಕಾರ್ಯಚರಣೆ ಕೈಗೊಳ್ಳಲಾಯಿತು.
ಈ ವೇಳೆ ಒಂದು ಕಡೆ ವಾಹನ ಒಂದರ ಮುಂಭಾಗದ ಎರಡು ಚಕ್ರಗಳುಳ್ಳ ಬಿಡಿಭಾಗ ( ಫ್ರಂಟ್ ಎಕ್ಸೆಲ್ ), ಹಾಗೂ ಇನ್ನೊಂದೆಡೆ ವಾಹನದ ಡ್ರೈವರ್ ಕ್ಯಾಬಿನ್ ಬಿಡಿಭಾಗವನ್ನು, ಡ್ರೆಜ್ಜಿಂಗ್ ಮಶೀನ್ ನ ಕ್ರೇನ್ ಬಳಸಿ ಮೇಲೆ ತ್ತಲಾಯಿತು. ಈ ಎರಡು ಬಿಡಿ ಭಾಗಗಳು , ಈ ಹಿಂದೆ ನದಿ ನೀರಿನಲ್ಲಿ ತೇಲಿ ಹೋಗಿ ಸಗಡಗೇರಿ ಭಾಗದಲ್ಲಿ ಮೇಲೆತ್ತಲಾಗಿದ್ದ ಗ್ಯಾಸ್ ಟ್ಯಾಂಕರ್ ನಿಂದ ಬೇರ್ಪಟ್ಟಿದ್ದ ಕ್ಯಾಬಿನ್ನಿನ ಬಿಡಿ ಭಾಗ ಎಂದು ಹೇಳಲಾಗುತ್ತಿದ್ದು, ಈ ಕುರಿತು ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.
ಸ್ಥಳೀಯ ಶಾಸಕ ಸತೀಶ ಸೈಲ್, ಎಸ್ಪಿ ನಾರಾಯಣ ಎಂ, ಬಂದರು ಇಲಾಖೆ ಅಧಿಕಾರಿ ಮಹೇಂದ್ರ, ಕೇರಳ ಮಂಜೇಶ್ವರ ಶಾಸಕ ಅಶ್ರಫ ಮತ್ತಿತರರು ಕಾರ್ಯಾಚರಣೆಯ ವೇಳೆ ಉಪಸ್ಥಿತರಿದ್ದು ಮಾರ್ಗದರ್ಶನ ನೀಡುತ್ತಿದ್ದರು. ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಈ ವರೆಗೂ ಮೂವರ ಪತ್ತೆ ಸಾಧ್ಯವಾಗಿಲ್ಲ. ಕೇರಳ ಮೂಲದ ಅರ್ಜುನನ್ನು ಹುಡುಕಿಕೊಂಡು ಆತನ ಸಹೋದರಿ ಅಂಜು ಮತ್ತು ಆಕೆಯ ಪತಿ, ಸ್ಥಳೀಯರಾದ ಜಗನ್ನಾಥ ನಾಯ್ಕ ಅಸ್ಥಿ ಆದರೂ ದೊರೆತಿತೇ ಎಂದು ಆತನ ಮಕ್ಕಳು ಮತ್ತು ಕುಟುಂಬಸ್ಥರು, ಅಂತೆಯೇ ಗಂಗೆಕೊಳ್ಳದ ಲೊಕೇಶ ನಾಯ್ಕ ಮೃತ ದೇಹ ಆದರೂ ಸಿಗಲಿ ಎಂದು ಆತನ ಸಹೋದರ ವಿನೋದ್,ಕಾರ್ಯಚರಣೆ ನಡೆಯುವ ಸ್ಥಳದಲ್ಲಿ ಇದ್ದು ಪ್ರಾರ್ಥಿಸುತ್ತಿರುವುದು ಕಂಡುಬಂತು.
ಶಿರೂರು ದುರ್ಘಟನೆ ಮತ್ತು ನದಿಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಜರಿದು ಬಿದ್ದ ಮಣ್ಣು ಹಾಗೂ ಕಲ್ಲು ಬಂಡೆಗಳ ರಾಶಿ, ಉಳುವರೆ ಭಾಗದಲ್ಲಿ ಮನೆಗಳನ್ನು ನೆಲಸಮ ಗೊಳಿಸಿ, ಸಣ್ಣು ಗೌಡಳ ಜೀವ ಹಾನಿಯ ಜೊತೆ,ಅಪಾರ ಆಸ್ತಿಪಾಸ್ತಿ ಹಾನಿ ಹಾಗೂ ಹಲವರು ಗಾಯಗೊಳ್ಳಲು ಕಾರಣವಾಗಿತ್ತು.
ಮುಗಿಲೆತ್ತರಕ್ಕೆ ಚಿಮ್ಮಿದ್ದ ಅಲೆಗಳ ಆರ್ಭಟದ ಹಿಂದೆ , ಗ್ಯಾಸ್ ಟ್ಯಾಂಕರ್ ಇಲ್ಲವೇ ಬೇರೆ ಯಾವುದೋ ಸ್ಪೋಟದಿಂದಾಗಿಯೇ ಇವೆಲ್ಲ ಆಗಿದ್ದು ಎಂದು ಪ್ರತ್ಯಕ್ಷ ದರ್ಶಿಗಳು ಆರಂಭದಿಂದಲೂ ಹೇಳುತ್ತಲೇ ಬಂದಿದ್ದರು. ಈ ನಡುವೆ ದೊರೆತಿದ್ದ ಕೆಲ ಮೃತದೇಹಗಳು ಛಿದ್ರ ಛಿದ್ರವಾಗಿತ್ತು. ಈಗ ದೊರೆತ ವಾಹನದ ಭಾಗಗಳು ಬೇರ್ಪಟ್ಟ ಬಗ್ಗೆ ಹಾಗೂ ಸ್ಥಾನಿಕ ಕೆಲ ಚಿತ್ರಣಗಳು , ನದಿ ಓಡಲಲ್ಲಿ ಸ್ಪೋಟಕ ರಹಸ್ಯ ಏನಾದರೂ ಹುದುಗಿರಬಹುದೇ ಎಂಬಂತಾಗಿದೆ. ಶೋಧ ಕಾರ್ಯ ಸಂಪೂರ್ಣ ಗೊಂಡು ರಹಸ್ಯ ಬಯಲಾಗಬಹುದೇ ಅಥವಾ ಕಾಲನಲ್ಲಿ ಹುದುಗಿ ಹೋಗ ಬಹುದೇ ಎಂಬ ಕುತೂಹಲ ಸಾರ್ವಜನಿಕರಲ್ಲಿದ್ದು, ಅದಕ್ಕೆ ಉತ್ತರ ದೊರೆತಿತೇ ಕಾದು ನೋಡಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ