ಮಾದಕ ವಸ್ತು ಮಾರುತ್ತಿದ್ದ ಅಂತರ್ ರಾಜ್ಯ ವ್ಯಕ್ತಿಯ ಬಂಧನ

ಗೋಕರ್ಣ : ಪುರಾಣ ಪ್ರಸಿದ್ಧ ಗೋಕರ್ಣ, ಇಲ್ಲಿನ ಸಮುದ್ರ ತೀರ ಸೇರಿದಂತೆ ನಾನಾ ಕಾರಣಗಳಿಂದ ದೇಶೀ ಹಾಗೂ ವಿದೇಶಿ ಪ್ರವಾಸಿಗರ ನೆಚ್ಚಿನ ತಾಣವಾಗಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇದೇ ವೇಳೆ ಇಲ್ಲಿ ಮಾದಕ ಜಾಲವೂ ಬೇರೂರಲು ಯತ್ನಿಸುತ್ತಿದ್ದು, ಆಗಾಗ ಕೆಲ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಅಂತಹದೇ ಒಂದು ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಮಾದಕ ದೃವ್ಯ ಚರಸ್ ಸಾಗಾಟ ಮತ್ತು ಮಾರಾಟದಲ್ಲಿ ತೊಡಗಿಕೊಂಡಿದ್ದ ವ್ಯಕ್ತಿ ಓರ್ವನನ್ನು ಲಕ್ಷಾಂತರ ರೂಪಾಯಿ ಮೌಲ್ಯದ ಚರಸ ನೊಂದಿಗೆ ವಶ ಪಡಿಸಿಕೊಂಡು ಕಾನೂನು ಕ್ರಮ ಮುಂದುವರೆಸಿದ್ದಾರೆ.

ನಮೂದಾದ ಅಪಾದಿತನಾದ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಹಿಮಾಚಲ‌ ಮೂಲದ ರಾಜುಸಿಂಗ್ ಈತನು ಕುಮಟಾ ತಾಲೂಕಿನ ಗೋಕರ್ಣ ವ್ಯಾಪ್ತಿಯ ಚೌಡಗೇರಿ ಗ್ರಾಮದ ಕೆಇಬಿ ಗ್ರೀಡ್ ಹತ್ತಿರದ ಬಿದ್ರಗೇರಿ ಕ್ರಾಸ್ ರಸ್ತೆ ಬಳಿ ತನ್ನ ಬಳಿ ಅಕ್ರಮವಾಗಿ ಸುಮಾರು 06 ಲಕ್ಷ ರೂ ಮೌಲ್ಯದ 975 ಗ್ರಾಂ ನಿಷೇದಿತ ಮಾದಕ ವಸ್ತು ಚರಸ ನ್ನು ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡುವ ತಯರಿಯಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಫಿರ್ಯಾದಿ ಆಚಾರ್. ಪಿ.ಐ. ಗೋಕರ್ಣ ಪೊಲೀಸ ಠಾಣೆ ರವರು ಸರ್ಕಾರದ ಪರವಾಗಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿ ಕೊಂಡ ಗೋಕರ್ಣ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ. ಎಸ್ಪಿ ನಾರಾಯಣ ಎಂ ಮತ್ತಿತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿ ಕಾರ್ಯಾಚರಣೆ ಕೈಗೊಂಡ ಗೋಕರ್ಣ ಪೊಲೀಸ್ ಠಾಣೆಯ ವಸಂತ ಆಚಾರ ಮತ್ತು ತಂಡದ ಕಾರ್ಯಕ್ಕೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version