Uttara Kannada
Trending

ಮರುಮೌಲ್ಯ ಮಾಪನ ಫಲಿತಾಂಶ: ಅಂಕೋಲಾ ತಾಲೂಕಾ ರ್ಯಾಂಕಿಂಗ್‍ನಲ್ಲಿ ಬದಲಾವಣೆ

[sliders_pack id=”3491″]

ಅಂಕೋಲಾ: ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ನಂತರ, ನೀರೀಕ್ಷಿತ ಫಲಿತಾಂಶ ದೊರೆಯದೇ ಕೆಲ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ಪರಿಷ್ಕøತ ಫಲಿತಾಂಶ ಪ್ರಕಟಿಸಲಾಗಿದ್ದು, ತಾಲೂಕಿನ ಟಾಪ್10 ರ್ಯಾಂಕಿಂಗ್ ಪಟ್ಟಿಯಲ್ಲಿಯೂ ಬದಲಾವಣೆಗಳಾಗಿವೆ.

ಅಗ್ರ ‘ಶ್ರೇಯಾ’oಕ: ಪಟ್ಟಣದ ನಿರ್ಮಲ ಹೃದಯ ಪ್ರೌಢಶಾಲೆಯ ವಿದ್ಯಾರ್ಥಿನಿ ‘ಶ್ರೇಯಾ’ ರಾಮದಾಸ ಭಟ್ಟ್ ಉತ್ತರಪತ್ರಿಕೆಯ ಮರುಮೌಲ್ಯ ಮಾಪನದಲ್ಲಿ ಭಾಷಾ ವಿಷಯ ಇಂಗ್ಲೀಷ್‍ಗೆ 8, ಹಿಂದಿ 2ಒಟ್ಟೂ 10 ಅಂಕಗಳನ್ನು ಹೆಚ್ಚಾಗಿ ಪಡೆದಿದ್ದು ಇವಳ ಒಟ್ಟೂ ಫಲಿತಾಂಶ 618ಕ್ಕೆ ಏರಿಕೆಯಾಗಿದೆ. ಈ ಮೂಲಕ ‘ಶೇಕಡ98.88’ಅಂಕಗಳೊಂದಿಗೆ ‘ತಾಲೂಕಿಗೆ ಪ್ರಥಮ’ ಸ್ಥಾನ ಪಡೆದುಕೊಂಡಿದ್ದಾಳೆ.ಇದೇ ವಿದ್ಯಾರ್ಥಿನಿಯು ಈ ಹಿಂದೆ ಗಣಿತ,ವಿಜ್ಞಾನ ಮತ್ತು ಸಮಾಜವಿಜ್ಞಾನದಲ್ಲಿ ತಲಾ 100ಅಂಕ ಗಳಿಸಿದ್ದಲ್ಲದೇ ಕನ್ನಡದಲ್ಲಿ 99ಅಂಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಳು. ಇದೇ ಶಾಲೆಯ ವಿದ್ಯಾರ್ಥಿಗಳಾದ ನಿಶ್ಚಲ ವೆಂಕಟ್ರಮಣ ನಾಯ್ಕ ಪರಿಷ್ಕøತ ಫಲಿತಾಂಶದ ಮೂಲಕ ಶೇಕಡ 98.4ಅಂಕ ಗಳಿಸಿ ತನ್ನದೇ ಶಾಲೆಯ ವಿದ್ಯಾರ್ಥಿನಿ ಸ್ಪೂರ್ತಿ ಗೋವಿಂದ ನಾಯಕ ಜೊತೆಯಲ್ಲಿ ತಾಲೂಕಿನ 3ನೇ ರ್ಯಾಂಕಿಗೆ ಬಡ್ತಿ ಪಡೆದಿದ್ದಾನೆ. ಈ ವಿದ್ಯಾರ್ಥಿ ಸಹ ನೃತ್ಯ, ಕ್ರೀಡೆ ಮತ್ತಿತರ ಪಠ್ಯೇತರ ಚಟುವಟಿಕೆಗಳಲ್ಲಿ ಹೆಸರಾಗಿದ್ದಾನೆ. ನಿರ್ಮಲ ಹೃದಯ ಪ್ರೌಢಶಾಲೆಯ ಸಿಂಚನಾ ವಿ.ನಾಯಕ ಈ ಹಿಂದಿನ ಫಲಿತಾಂಶದಲ್ಲಿ ಶೇ.96.96 ಅಂಕ ಗಳಿಸಿ ತಾಲೂಕಿನ ಟಾಪ್10 ಪಟ್ಟಿಯಲ್ಲಿ 8ನೇ ರ್ಯಾಂಕ್ ಗಳಿಸಿಕೊಂಡಿದ್ದಾಳೆ.ಒಟ್ಟಾರೆಯಾಗಿ ಈ ಹಿಂದಿನ ಫಲಿತಾಂಶ ಮತ್ತು ಪರಿಷ್ಕøತ ಫಲಿತಾಂಶದಿಂದಾಗಿ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಅಗ್ರ ಶ್ರೇಯಾಂಕ ಗಳಿಸಿ ತಾಲೂಕಿನ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ನಿರ್ಮಲಾ ಹೃದಯದ ವಿದ್ಯಾರ್ಥಿನಿಯ ಪರಿಶ್ರಮಕ್ಕೆ ತಡವಾಗಿ ಆದರೂ ತಕ್ಕ ಪ್ರತಿಫಲ ದೊರೆತಂತಾಗಿದ್ದು, ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಶಿಕ್ಷಕ ವೃಂದ ಮತ್ತು ಹಿತೈಷಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅವರ್ಸಾದ ಹಿರಿಮೆ : ದ್ವಿತೀಯ ಪಿ.ಯು.ಸಿಯಲ್ಲಿ ಸ್ಥಳೀಯ ಕಾಲೇಜಿನಲ್ಲೇ ಓದಿದ್ದ ವೈಷ್ಣವಿ ರೇವಣಕರ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ರ್ಯಾಂಕ ಪಡೆದು ಗಮನ ಸೆಳೆದ ಬೆನ್ನಿಗೆ, ಅದೇ ಊರಿನ ವಿದ್ಯಾರ್ಥಿನಿ ಶ್ರೇಯಾ ಭಟ್ಟ್ ಎಸ್.ಎಸ್.ಎಲ್.ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ಅವರ್ಸಾ ಗ್ರಾಮದ ಹಿರಿಮೆಗೆ ಗರಿ ಮೂಡಿಸಿದ್ದಾಳೆ.

ಅಜೇಯನ ರ್ಯಾಂಕ್ ಬದಲಾವಣೆ: ಈ ಹಿಂದೆ 617ಅಂಕ ಗಳಿಸಿ(ಶೇ.98.72) ತಾಲೂಕಿಗೆ ಪ್ರಥಮನೆನಿಸಿದ್ದ ಹಟ್ಟಿಕೇರಿಯ ಜೆಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಅಜೇಯ ಪಿ. ಮಹಾಲೆ, ತನ್ನ ಪ್ರತಿ ಸ್ಪರ್ಧಿ ನಿರ್ಮಲ ಹೃದಯ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೇಯಾ ಭಟ್ ಇವಳ ಪರಿಷ್ಕøತ ಫಲಿತಾಂಶ ಮುನ್ನಡೆಯಿಂದಾಗಿ ತನ್ನ ಪ್ರಥಮ ರ್ಯಾಂಕಿಂಗ್ ಪಟ್ಟವನ್ನು ಬಿಟ್ಟುಕೊಟ್ಟು 2ನೇ ರ್ಯಾಂಕ್‍ಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಟಾಪ್10 : ಉಳಿದಂತೆ ತಾಲೂಕಿನ ಟಾಪ್10 ಪಟ್ಟಿಯಲ್ಲಿ ಅಚವೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನನ್ಯ ಉಮೇಶ ಗಾಂವಕರ(97.76) ಹಟ್ಟಿಕೇರಿ ಜೆ.ಸಿ ಶಾಲೆಯ ಸೋನಾಲಿ ಎಂ.ಗಾಂವಕರ (97.76) ಅಂಕ ಗಳಿಸಿ ಚತುರ್ಥ ಸ್ಥಾನ ಗಳಿಸಿದ್ದಾರೆ. ಮತ್ತೆ ಅಚವೆ ಶಾಲೆಯ ವಿದ್ಯಾರ್ಥಿಗಳಾದ ಆದಿತ್ಯ ಮಧುಕರ ಭಟ್(97.44) ಶಂಕರ ಗೌಡ(97.28) ಕ್ರಮವಾಗಿ 5 ಮತ್ತು 6ನೇ ರ್ಯಾಂಕ್ ಗಳಿಸಿದ್ದು ಹಟ್ಟಿಕೇರಿಯ ಜೆಸಿ ಸ್ಕೂಲ್ ವಿದ್ಯಾರ್ಥಿ ಬಿ.ಜೇ.ಹೃತೀಕ(97.12) ಅಂಕ ಗಳಿಸಿ 7ನೇ ರ್ಯಾಂಕ್ ತನ್ನದಾಗಿಸಿಕೊಂಡಿದ್ದಾನೆ.

ಅವರ್ಸಾದ ಕಾತ್ಯಾಯಿನಿ ಪ್ರೌಢಶಾಲೆಯ ವಿದ್ಯಾರ್ಥಿ (96.80) ಅಂಕಗಳಿಸುವುದರೊಂದಿಗೆ 9ನೇ ಸ್ಥಾನ ಮತ್ತು ಜೈಹಿಂದ್ ಪ್ರೌಢಶಾಲೆಯ ವಿದ್ಯಾರ್ಥಿ ಮಹೇಂದ್ರ ಪರಶುರಾಮ ಭೋವಿ ವಡ್ಡರ್ (96.64)ಅಂಕ ಗಳಿಸಿ 10ನೇ ಸ್ಥಾನ ಗಳಿಸಿಕೊಂಡಿದ್ದಾನೆ. ಸಾಧಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸೋಣ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಚಿಂತಿಸುವ ಅವಶ್ಯಕತೆ ಇಲ್ಲ, ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ

ಶ್ರೀ ಕೇರಳ, ಕರಾವಳಿ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು.
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ:-8884997762
( ಜಾಹೀರಾತು )

Back to top button