ಡಾ. ಆರ್ ಜಿ ಗುಂದಿಯವರನ್ನರಸಿ ಬಂದ ಅಕಾಡಮಿ ಪುರಸ್ಕಾರ

[sliders_pack id=”3491″]

ಅಂಕೋಲಾ : ಕನ್ನಡ ಕರಾವಳಿಯ ಗಂಡುಮೆಟ್ಟಿನ ಕಲೆಯೆನಿಸಿರುವ ‘ಯಕ್ಷ’ರಂಗದಲ್ಲಿ ಹಲವಾರು ಮೇರು ಕಲಾವಿದರು ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ಅಂತವರ ಸಾಲಿನಲ್ಲಿಯೇ ಬರುವ ಜಿಲ್ಲೆಯ ಮೂವರು ಕಲಾ-ಸಾಧಕರನ್ನು ‘ಕರ್ನಾಟಕ ಯಕ್ಷಗಾನ ಅಕಾಡೆಮಿ’ ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ತಾಲೂಕಿನ ಡಾ. ರಾಮಕೃಷ್ಣ ಜಿ.ಗುಂದಿಯವರು ಓರ್ವರಾಗಿರುವುದು ವಿಶೇಷವಾಗಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ನಾನಾ ಸಂಘಟನೆಗಳು, ಗಣ್ಯರು ಡಾ. ಆರ್.ಜಿ.ಗುಂದಿಯವರನ್ನು ಸನ್ಮಾನಿಸಿ ಗೌರವಿಸುತ್ತಿದ್ದು, ಶುಕ್ರವಾರ ಕೆಲ ಸಮಾನ ಮನಸ್ಕ ಸಂಘಟನೆ ಮುಖ್ಯಸ್ಥರು ಗುಂದಿಯವರ ಮನೆಗೆ ತೆರಳಿ, ಸರಳ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.


ಗೌರವ ಪ್ರಕಾಶನದ ಸಂಚಾಲಕ ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ), ಕನ್ನಡ ಚಂದ್ರಮ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ಪುರಸಭೆ ಮಾಜಿ ಸದಸ್ಯ ಸಂದೀಪ ಬಂಟ್, ಚಿನ್ನದಗರಿ ಯುವಕ ಸಂಘದ ಗೌರವಾಧ್ಯಕ್ಷ ವಿಲಾಸ ನಾಯಕ(ಪುಟ್ಟು) ಸಾಂಧರ್ಬಿಕವಾಗಿ ಮಾತನಾಡಿ ಯಕ್ಷಗಾನ ಕಲೆ, ಡಾ.ಗುಂದಿಯವರ ಬಹುಮುಖ ವ್ಯಕ್ತಿತ್ವದ ಕುರಿತು ಮಾತನಾಡಿ, ಮುಂದಿನ ದಿನಗಳಲ್ಲಿಯೂ ಡಾ. ಗುಂದಿಯವರ ಕಲಾ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿಯೂ ಒಲಿದು ಬರಲಿ ಎಂದು ಶುಭ ಹಾರೈಸಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ವಿದ್ಯಾಧರ ಮೊರಬಾ, ಡಾ. ಗುಂದಿಯವರಿಗೆ ಬಂದ ಗೌರವ ಪುರಸ್ಕಾರ ನಮ್ಮ ತಾಲೂಕು-ಜಿಲ್ಲೆಗೆ ಹೆಮ್ಮೆ ಮೂಡಿಸಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಗುಂದಿ, ಈ ಗೌರವದ ಮೂಲಕ ತಮ್ಮ ಕಲಾ ಪ್ರೀತಿ ಇನ್ನಷ್ಟು ಹೆಚ್ಚಲಿದೆ ಎಂದರಲ್ಲದೇ, ಸರ್ಕಾರ ಆಪತ್ತಕಾಲದಲ್ಲಿ ಕಲಾವಿದರ ನೆರವಿಗೆ ಮುಂದಾಗುವ ಮೂಲಕ ಕಲೆ-ಕಲಾವಿದನನ್ನು ಉಳಿಸಿ ಬೆಳೆಸಬೇಕಿದೆ.


ಈ ಸಂದರ್ಭದಲ್ಲಿ ಬೆಳಂಬಾರ ಗ್ರಾ.ಪಂ ಮಾಜಿ ಅಧ್ಯಕ್ಷ ಮಾದೇವ ಬಿ.ಗೌಡ, ಚಿನ್ನದಗರಿ ಯುವಕ ಸಂಘದ ಗೌರವ ಪ್ರತಿನಿಧಿ ಮತ್ತು ಭಾರತೀಯ ಭೂಸೇನೆ ಯೋಧ ದಿನೇಶ ಕೆ. ಗಾಂವಕರ, ಉಪನ್ಯಾಸಕ ಮಂಜುನಾಥ ಇಟಗಿ, ಡಾ. ಗುಂದಿಯವರ ಧರ್ಮಪತ್ನಿ ಮತ್ತು ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ನಿರ್ಮಲಾ ಗುಂದಿ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಸಂಘಟಕ ಪ್ರಮುಖ, ಕಡಲು ಪ್ರಕಾಶನದ ಸಂಚಾಲಕ ನಾಗರಾಜ ಮಂಜಗುಣಿ ಸ್ವಾಗತಿಸಿ, ನಿರೂಪಿಸಿದರು.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Exit mobile version