ವಿಮಾನ ನಿಲ್ದಾಣಕ್ಕೆ ಗನ್ ಇಟ್ಟುಕೊಂಡು ತೆರಳಿದ್ದ ಮಾಜಿ ಶಾಸಕ ಆನಂದ್ ಅಸ್ನೋಟಿಕರ್ ಪೊಲೀಸರ ವಶಕ್ಕೆ?

ಕಾರವಾರ : ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಬೆಂಗಳೂರಿನಿoದ ಗೋವಾಕ್ಕೆ ತೆರಳಲು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ವಿಮಾನ ನಿಲ್ದಾಣದಲ್ಲಿ ಅಸ್ನೋಟಿಕರ್ ಬ್ಯಾಗ್ ನಲ್ಲಿ ಪಿಸ್ತೂಲ್ ಇರುವುದು ಪತ್ತೆಯಾಗಿದೆ. ಹೀಗಾಗಿ ತಪಾಸಣೆ ಮಾಡಿದ ವಿಮಾನ ನಿಲ್ದಾಣದ ಸಿಬ್ಬಂದಿಗಳು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮಾಹಿತಿ ಕೇಳಿದ್ದು ಗನ್ ಗೆ ಲೈಸನ್ಸ್ ಇದ್ದರೂ ಸಂಬoಧಪಟ್ಟ ಪತ್ರಗಳನ್ನು ಇಟ್ಟುಕೊಳ್ಳದೇ ಹಾಗೂ ಪೂರ್ವ ಮಾಹಿತಿ ನೀಡದೆ ತೆರಳಿದ್ದರು ಎನ್ನಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದ ರಕ್ಷಣಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದರು.
ಗನ್‌ಗೆ ಪರವಾನಿಗೆ ಇದ್ದು, ಸ್ವರಕ್ಷಣೆಗೋಸ್ಕರ ಇಟ್ಟುಕೊಂಡಿದ್ದೆ ಎಂದು ಆನಂದ್ ಅಸ್ನೋಟಿಕರ್ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವರ ಗನ್ ಲೈಸನ್ಸ್ ಕಾರವಾರದಲ್ಲಿ ಕೆಲವೇ ತಿಂಗಳ ಹಿಂದೆ ಲೈಸನ್ಸ್ ರಿನೀವಲ್ ಮಾಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಕರಾವಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಾವು
- SSLC ಯಲ್ಲಿ ಸಾಧನೆ ಮಾಡಿದ ರೈತ ಕುಟುಂಬದ ಕನ್ನಡದ ಕುವರಿಗೆ ಇಂಜಿನೀಯರ್ ಆಗೋ ಕನಸು: ಹೆಸರಿಗೆ ತಕ್ಕಂತೆ ಇದೆ ಗ್ರಾಮೀಣ ಭಾಗದ ಆದರ್ಶ ಪ್ರೌಢಶಾಲೆ
- ಯುದ್ಧ ಸಿದ್ಧತೆ ಹಿನ್ನಲೆ: ಉಪವಾಸ ಸತ್ಯಾಗ್ರಹ ಮುಂದಕ್ಕೆ
- ಅತ್ಯಂತ ಸುಸಜ್ಜಿತವಾದ ಮಳಿಗೆ ಮಾರಾಟಕ್ಕಿದೆ: ಕೂಡಲೇ ಸಂಪರ್ಕಿಸಿ
- ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಮೇ 10 ರಂದು ಪ್ರವೇಶ ದಾಖಲಾತಿ ಪರೀಕ್ಷೆ