ಕುಮಟಾ, ಹೊನ್ನಾವರದ ಇಂದಿನ ಕರೊನಾ ಮಾಹಿತಿ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 16 ಜನರಲ್ಲಿ ಕರೊನಾ ದೃಢಪಟ್ಟಿದೆ. ತಾಲೂಕಿನ ಕಲಬಾಗ್, ಕೋಡ್ಕಣಿ, ಮೂರುಕಟ್ಟೆ, ಹಂದಿಗೋಣ, ಹಿರೆಗುತ್ತಿ, ಹಣ್ಣೆಮಠ, ಮುಂತಾದ ಪ್ರದೇಶದಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.

ಕುಮಟಾದ ಕಲಭಾಗದ 68 ವರ್ಷದ ವೃದ್ಧ, 62 ವರ್ಷದ ವೃದ್ಧೆ, ಕೊಡ್ಕಣಿಯ 40 ವರ್ಷದ ಪುರುಷ, ಹಿರೆಗುತ್ತಿಯ 24 ವರ್ಷದ ಯುವಕ, ಕುಮಟಾ ಗೊನೆಹಳ್ಳಿಯ 33 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಹಣ್ಣೆಮಠದ 54 ವರ್ಷದ ಪುರುಷ, ಹಂದಿಗೋಣದ 27 ವರ್ಷದ ಯುವತಿ, ಕುಮಟಾದ ಮೂರುಕಟ್ಟೆಯ 56 ವರ್ಷದ ಪುರುಷ, ಕುಮಟಾದ 58 ವರ್ಷದ ಪುರುಷ ಸೇರಿದಂತೆ ಇಂದು ಒಟ್ಟು 17 ಜನರಲ್ಲಿ ಸೋಂಕು ದೃಢಪಟ್ಟಿದೆ. ಇಂದು 16 ಪ್ರಕರಣ ದೃಢಪಟ್ಟ ಬೆನ್ನಲ್ಲೆ, ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 893 ಕ್ಕೆ ಏರಿಕೆಯಾಗಿದೆ.

ಹಣ್ಣೆಮಠದ 54 ವರ್ಷದ ಪುರುಷ, ಹಂದಿಗೋಣದ 27 ವರ್ಷದ ಯುವತಿ, ಕುಮಟಾದ ಮೂರುಕಟ್ಟೆಯ 56 ವರ್ಷದ ಪುರುಷ, ಕುಮಟಾದ 58 ವರ್ಷದ ಪುರುಷ, 46 ವರ್ಷದ ಪುರುಷ, 86 ವರ್ಷದ ವೃದ್ದೆ, 22 ವರ್ಷದ ಯುವಕ, 62 ವರ್ಷದ ವೃದ್ದ, 49 ವರ್ಷದ ಮಹಿಳೆ, 54 ವರ್ಷದ ಮಹಿಳೆ, 28 ವರ್ಷದ ಯುವತಿಯಲ್ಲಿ ಸೋಂಕು ದೃಡಪಟ್ಟಿದೆ. ಇಂದಿ 16 ಪ್ರಕರಣ ಸೇರಿ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 893 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ 14 ಪಾಸಿಟಿವ್:

ಹೊನ್ನಾವರ: ತಾಲೂಕಿನಲ್ಲಿ ಇಂದು 14 ಜನರಲ್ಲಿ ಕರೊನಾ ಪಾಸಿಟಿವ್ ಕಂಡುಬoದಿದೆ. ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ 9 ಮತ್ತು ಗ್ರಾಮೀಣ ಭಾಗದಲ್ಲಿ 5 ಕೇಸ್ ದೃಢಪಟ್ಟಿದೆ. ಕರ್ಕಿಯಲ್ಲಿ 2, ಮಂಕಿ ಅಳ್ಳಂಕಿಯಲ್ಲಿ ತಲಾ ಒಂದೊoದು ಪ್ರಕರಣ ಕಾಣಿಸಿಕೊಂಡಿದೆ.

ಹೊನ್ನಾವರ ಪಟ್ಟಣದ ಪ್ರಭಾತನಗರದ 46 ವರ್ಷದ ಮಹಿಳೆ, ರಥಬೀದಿಯ 55 ವರ್ಷದ ಪುರುಷ, 87 ವರ್ಷದ ಮಹಿಳೆ, ಕಮಟೆಹಿತ್ಲದ 65 ವರ್ಷದ ಮಹಿಳೆ, ಬಂದರರೋಡಿನ 62 ವರ್ಷದ ಪುರುಷ, ಸಾಲೇಹಿತ್ಲದ 49 ವರ್ಷದ ಮಹಿಳೆ, ದುರ್ಗಾಕೇರಿಯ 75 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಅಳ್ಳಂಕಿಯ 30 ವರ್ಷದ ಯುವಕ, ಮಂಕಿಯ 50 ವರ್ಷದ ಪುರುಷ, ಕರ್ಕಿಯ 70 ವರ್ಷದ ಪುರುಷ, 39 ವರ್ಷದ ಪುರುಷ ಸೇರಿ ಒಟ್ಟು 14 ಜನರಲ್ಲಿ ಸೋಂಕು ಪತ್ತೆಯಾಗಿದೆ.

ತಾಲೂಕಾ ಆಸ್ಪತ್ರೆಯಲ್ಲಿ 19 ಜನರು ಚಿಕಿತ್ಸೆ ಪಡೆಯಿತ್ತಿದ್ದು 217 ಸೋಂಕಿತರಿಗೆ ಮನೆಯಲ್ಲಿಯೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

Exit mobile version