ಮೂವರು ಬೈಕ್ ಕಳ್ಳರ ಬಂಧನ: ಇವರು ಸಿಕ್ಕಿಬಿದ್ದಿದ್ದು ಹೇಗೆ ನೋಡಿ

ಮುಂಡಗೋಡ: ತಾಲೂಕಿನಲ್ಲಿ ಬೈಕ್ ಕಳ್ಳತನ ಮಾಡಿದ ಆರೋಪದಡಿಯಲ್ಲಿ ಹಾವೇರಿ ಜಿಲ್ಲೆಯ ಕಾಗಿನೆಲೆ ಗ್ರಾಮದ ಮೂರು ಜನರ ಆರೋಪಿತರನ್ನು ಬಂಧಿಸಲಾಗಿದೆ. ಬಂಧಿತರಿoದ ಮೂರು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿತರು ಚಾಂದಬಾಷಾ ಶಿಕಾರಿಪುರ, ಚಂದ್ರು ಬುಡಪ್ಪನಹಳ್ಳಿ,ಹಜರತ್ಅಲಿ ಶಮನಾಬಾವಿ ಎಂದು ತಿಳಿದುಬಂದಿದೆ.


ಪಟ್ಟಣದಲ್ಲಿ 2019ರಲ್ಲಿ ಕಳ್ಳತನವಾದ ಮೋಟಾರ್ ಸೈಕಲ್ಗಳ ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸರು ತಪಾಸಣೆಯಲ್ಲಿದ್ದಾಗ ಮಾಹಿತಿ ಮೇರೆಗೆ ಹಾವೇರಿ ಜಿಲ್ಲೆ ಕಾಗಿನೆಲೆ ಗ್ರಾಮದ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಪಟ್ಟಣದಲ್ಲಿ ಕಳುವಾದ ಪಲ್ಸರ್ 150 ಸಿ.ಸಿ ಮೋಟಾರ್ ಸೈಕಲ್ ಹಾಗೂ ಹೀರೋ ಹೊಂಡಾ ಸ್ಪೇಂಡರ ಪ್ಲಸ್ ಮೋಟಾರ್ ಸೈಕಲ್ ಹಾಗೂ 2018 ನೇ ಸಾಲಿನಲ್ಲಿ ಹಾವೇರಿ ಗೆಳೆಯರ ಬಳಗ ಶಾಲೆಯ ಹತ್ತಿರ ಕಳುವು ಮಾಡಿದ ಹೊಸ ಹೀರೋ ಹೊಂಡಾ ಮೋಟಾರ್ ಸೈಕಲ್ಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಎಸ್ಪಿ ಶಿವಪ್ರಕಾಶ್ ದೇವರಾಜು ಪ್ರಶಂಸೆ ವ್ಯಕ್ತಪಡಿಸಿದ್ದು ಪತ್ತೆ ಕಾರ್ಯದ ತಂಡದವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ. ಪೊಲೀಸ್ ಅಧೀಕ್ಷಕರು, ಉತ್ತರಕನ್ನಡ ಕಾರವಾರದ ಶಿವಪ್ರಕಾಶ್ ದೇವರಾಜು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಎಸ್ ಭದರಿನಾಥ ರವರ ನಿರ್ದೇಶನದ ಮೇರೆಗೆ, ಗೋಪಾಲಕೃಷ್ಣ ನಾಯಕ ಪೊಲೀಸ್ ಉಪಾಧೀಕ್ಷಕರು ಶಿರಸಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ಪ್ರಭುಗೌಡ ಡಿ ಕೆ ಪಿಐ ಮುಂಡಗೋಡ ರವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿ ಯವರಾದ ಪಿ.ಎಸ್.ಐ ಬಸವರಾಜ, ಎ.ಎಸ್.ಐ ಎಸ್.ವಿ.ಚವ್ಹಾಣ, ಅಶೋಕ ಆರ್ ರಾಠೋಡ, ಪೊಲೀಸರಾದ ರಾಘವೇಂದ್ರ ಜಿ, ರಾಘವೇಂದ್ರ ಪಟಗಾರ, ಭಗವಾನ್ ಗಾಂವ್ಕರ್, ವಿನೋದ್ ಕುಮಾರ್ ಜಿ ಬಿ, ಅರುಣ್ ಕುಮಾರ್ ಬಾಗೇವಾಡಿ, ಕುಮಾರ್ ಬಣಕಾರ, ಕಾರವಾರ ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ಸುಧೀರ್ ಮಡಿವಾಳ, ಅಣ್ಣಪ್ಪ ಬಡಿಗೇರ, ರಮೇಶ್ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version