ಕುಂಟವಾಣಿ ಪ್ರೌಢಶಾಲೆಯಲ್ಲಿ ಶ್ರೀಮತಿ ಗೀತಾ ಮೇಸ್ತ ಅವರಿಗೆ ಬಿಳ್ಕೊಡುಗೆ ಸಮಾರಂಭ

ಭಟ್ಕಳ: 1994 ರಲ್ಲಿ ಭಟ್ಕಳ ತಾಲೂಕಿನತೆಂಗಿನಗುoಡಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ನಂತರ ಹಡಿನಬಾಳ ಪ್ರೌಡಶಾಲೆಯಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ ಶ್ರೀಮತಿ ಗೀತಾ ಮೇಸ್ತರವರು ವೃತ್ತಿಯುದ್ದಕ್ಕೂತಮ್ಮಕಾರ್ಯಶೃದ್ಧೆಯಿಂದ ಚಿರಪರಿಚಿತರು. ಅಪಾರ ಶಿಷ್ಯ ಬಳಗ ಹೊದಿದ್ದಾರೆ.

ಸರಕಾರಿ ಪ್ರೌಢಶಾಲೆ ಕುಂಟವಾಣಿಯಲ್ಲಿ ಮುಖ್ಯಾಧ್ಯಾಪಕರಾಗಿ ತಮ್ಮ ಅನುಪಮ ಸೇವೆ ಸೇವೆ ಸಲ್ಲಿಸಿ ಇಂದುಸೇವಾ ನಿವೃತ್ತಿಹೊಂದುತ್ತಿರುವಇವರನ್ನುಊರ ಪ್ರಮುಖರು ಹಾಗೂ ಶಾಲೆಯ ಶಿಕ್ಷಕರೆಲ್ಲ ಸೇರಿ ಹಾರ್ದಿಕವಾಗಿ ಬಿಳ್ಕೊಟ್ಟರು.


ಸಭೆಯಲ್ಲಿಗ್ರಾಮ ಪಂಚಾಯತ ಹಾಡವಳ್ಳಿ ಮಾಜಿಅಧ್ಯಕ್ಷರಾದ ಶ್ರೀ ಶ್ರೀಧರ ಶೆಟ್ಟಿ, ಊರ ಹಿರಿಯರಾದ ಸೋಮಯ್ಯಗೊಂಡ, ಬಡಿಯಾಗೊಂಡ, ಎಸ್,ಡಿಎಮ,ಸಿ ಉಪಾಧ್ಯಕ್ಷರಾದಅನಂತಚಿಕ್ಕಯ್ಯ ಶೆಟ್ಟಿ ಪ್ರಮುಖರಾದ ನಾರಾಯಣ ಶೆಟ್ಟಿ, ವೆಂಕಟೇಶ ಶೆಟ್ಟಿ, ಬಡಿಯಾಗೊಂಡ ಸುರೇಶ ಶೆಟ್ಟಿ ಮುಂತಾದವರು ಹಾಜರಿದ್ದರು.

ಶಾಲೆಯ ಪ್ರಭಾರಿ ಮುಖ್ಯಾಧ್ಯಾಪಕರಾದಡಾ|| ಸುರೇಶತಾಂಡೇಲ್‌ರವರು ಸರ್ವರನ್ನು ಸ್ವಾಗತಿಸುವದರಜೊತೆಗೆ ಮೇಡಂರವರ ಸೇವೆಯನ್ನು ಸ್ಮರಿಸಿಕೊಂಡರು ಶಿಕ್ಷಕರಾದ ಕುಮಾರ ನಾಯ್ಕ ಮಾರುತಿ ನಾಯ್ಕತಮ್ಮಅನುಭವವನ್ನು ಹಂಚಿಕೊoಡರು ಶಿಕ್ಷಕರಾದ ಆನಂದ ನಾಯ್ಕರವರು ಕಾರ್ಯಕ್ರಮ ನಿರೂಪಿಸಿದರು.

ವಿಸ್ಮಯ ನ್ಯೂಸ್, ಭಟ್ಕಳ

Exit mobile version