ಅಂಕೋಲಾದಲ್ಲಿಂದು 07 ಕೊವಿಡ್ ಕೇಸ್

ಗುಣಮುಖ 12 : ಸಕ್ರಿಯ 92.
ಒಂದೇ ದಿನ 384 ಗಂಟಲುದ್ರವ ಪರೀಕ್ಷೆ
ಈವರೆಗಿನ ಗರಿಷ್ಠ ದಾಖಲೆ

ಅಂಕೋಲಾ : ತಾಲೂಕಿನಲ್ಲಿ ಶನಿವಾರ ಒಟ್ಟೂ 7 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಸೋಂಕು ಮುಕ್ತರಾದ 12 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನಲ್ಲಿರುವ 54 ಮಂದಿ ಸಹಿತ ತಾಲೂಕಿನಲ್ಲಿ ಒಟ್ಟೂ 92 ಪ್ರಕರಣಗಳು ಸಕ್ರಿಯವಾಗಿದೆ.ಅಂಬರಕೊಡ್ಲ, ಬೇಲೇಕೇರಿ, ಪುರ್ಲಕ್ಕಿಬೇಣ, ಮಂಜಗುಣಿ ಮತ್ತು ಹಿಲ್ಲೂರು ವ್ಯಾಪ್ತಿಯಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

ಗಂಟಲುದ್ರವ ಪರೀಕ್ಷೆ

ಪುರಸಭೆ ಆವರಣ, ಲಕ್ಷ್ಮೇಶ್ವರ, ವಂದಿಗೆ, ಬ್ರಹ್ಮೂರು, ಕಬ್‍ಗಾಲ್, ಹಾರವಾಡ ಸೇರಿದಂತೆ ತಾಲೂಕಿನಲ್ಲಿ ಒಟ್ಟೂ 384 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಒಂದೇ ದಿನದಲ್ಲಿ ಇಷ್ಟೊಂದು ಗಂಟಲುದ್ರವ ಮಾದರಿ ಸಂಗ್ರಹದಲ್ಲಿ ಈವರೆಗಿನ ಗರಿಷ್ಟ ದಾಖಲೆ ಎನಿಸಿದೆ.

ಗಂಟಲುದ್ರವ ಮಾದರಿ ಸಂಗ್ರಹದ ವೇಳೆ ಆರೋಗ್ಯ ಸಿಬ್ಬಂದಿಗಳು ಮತ್ತಿತರ ಕರೋನಾ ವಾರಿಯರ್ಸಗಳು, ತಮ್ಮ ಜೀವದ ಅಪಾಯದ ಅರಿವಿದ್ದೂ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದನ್ನು ಶ್ಲಾಘೀಸಲೇ ಬೇಕಿದೆ.

ಲಕ್ಷ್ಮೇಶ್ವರದಲ್ಲಿ ನಡೆದ ವಿಶೇಷ ಕ್ಯಾಂಪ ಮಾದರಿ ಗಂಟಲುದ್ರವ ಸಂಗ್ರಹಣಾ ಕಾರ್ಯದ ವೇಳೆ ಸ್ಥಳೀಯ ಪುರಸಭಾ ಸದಸ್ಯ ಕಾರ್ತಿಕ ಎಸ್. ನಾಯ್ಕ, ನೋಡೆಲ್ ಅಧಿಕಾರಿ ಬೀರಣ್ಣ ನಾಯಕ, ಲ್ಯಾಬ್ ಟೆಕ್ನಿಸಿಯನ್ ಸೀಮಾ ಹೆಬ್ಬಾರ, ಆರೋಗ್ಯ ಸಹಾಯಕಿ ಶಾಲಿನಿ, ಆಶಾಕಾರ್ಯಕರ್ತೆಯರಾದ ಕವಿತಾ ನಾಯ್ಕ, ಸುನಿತಾ ಗಾಂವಕರ, ಅಂಗನವಾಡಿ ಕಾರ್ಯಕರ್ತೆ ವೀಣಾ ನಾಯ್ಕ, ಸಹಾಯಕಿ ಅಂಕಿತಾ ನಾಯ್ಕ, ಪೊಲೀಸ್ ಸಿಬ್ಬಂದಿ ನಯನಾ, ಬಿ.ಎಲ್.ಓ ಸಂತೋಷ ನಾಯ್ಕ. ಹಾಜರಿದ್ದರು.

ಪುರಸಭೆ : ಪುರಸಭೆ ಆವರಣದಲ್ಲಿ ಸ್ಥಳೀಯ ತರಕಾರಿ ವ್ಯಾಪಾರಸ್ಥರು ಮತ್ತಿತರರ ಗಂಟಲುದ್ರವ ಪರೀಕ್ಷೆಗೆ ಒತ್ತು ನೀಡಲಾಗಿತ್ತು. ಈ ವೇಳೆ ಕೆಲ ಬೀದಿ ಬದಿ ವ್ಯಾಪಾರಸ್ಥರು, ಸಾರ್ವಜನಿಕರು ಅದ್ಯಾವೂದೋ ಅಂಜಿಕೆಯಿಂದ ಕ್ಯಾಂಪ ಸ್ಥಳದತ್ತ ಸುಳಿಯದೇ, ಸ್ಥಳದಿಂದ ಕಾಲ್ಕಿತ್ತಂತಿತ್ತು. ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಹ್ಲಾದ, ತಾಲೂಕಾ ಆರೋಗ್ಯಾಧಿಕಾರಿ ಡಾ. ಅರ್ಚನಾ ನಾಯ್ಕ ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version