ಅಂಕೋಲಾ : ತಾಲೂಕಿನಲ್ಲಿ ಭಾನುವಾರ ಒಟ್ಟೂ 17 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಸೋಂಕು ಮುಕ್ತರಾದ 13 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನಲ್ಲಿರುವ 59 ಮಂದಿ ಸಹಿತ ತಾಲೂಕಿನಲ್ಲಿ ಒಟ್ಟೂ 96 ಪ್ರಕರಣಗಳು ಸಕ್ರಿಯವಾಗಿದೆ.
ಇಂದು ಅವರ್ಸಾ ವ್ಯಾಪ್ತಿಯ ಕವಲಗದ್ದೆ, ನೀಲಪುರಂ, ಭಾವಿಕೇರಿ, ಅಚವೆ, ಮೊಗಟಾ, ವಂದಿಗೆ, ಮಂಜಗುಣಿ, ಬೊಬ್ರುವಾಡ, ಕಾಕರಮಠ, ಕಬಗಾಲ, ದಿನಕರ ದೇಸಾಯಿ ರಸ್ತೆಗೆ ಹೊಂದಿಕೊಂಡ ಪ್ರದೇಶ ವ್ಯಾಪ್ತಿ ಸೇರಿದಂತೆ ತಾಲೂಕಿನ ವಿವಿಧೆಡೆ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 209 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಹೊನ್ನಾವರದಲ್ಲಿ ಏಳು ಪಾಸಿಟಿವ್
ಹೊನ್ನಾವರ: ತಾಲೂಕಿನಲ್ಲಿ ಇಂದು ಏಳು ಜನರಲ್ಲಿ ಕರೊನಾ ದೃಢಪಟ್ಟಿದೆ. ಪಟ್ಟಣ ಭಾಗದಲ್ಲಿ 4, ಗ್ರಾಮೀಣ ಭಾಗದಲ್ಲಿ 3 ಕೇಸ್ ದಾಖಲಾಗಿದೆ. ಪಟ್ಟಣದ ಕಿಂತಾಲಕೇರಿಯ 3 ವರ್ಷದ ಮಗು, ಪಟ್ಟಣದ ಖಾಸಗಿ ಆಸ್ಪತ್ರೆಯ 30 ವರ್ಷದ ಯುವತಿ, ಪಟ್ಟಣದ 36 ವರ್ಷದ ಮಹಿಳೆ, ಕರ್ನಲ್ ಹಿಲ್ ನ 32 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದೆ.
ಗ್ರಾಮೀಣ ಭಾಗವಾದ ನವಿಲಗೋಣದ 76 ವರ್ಷದ ಪುರುಷ, 40 ವರ್ಷದ ಪುರುಷ, ಕರ್ಕಿಯ 27 ವರ್ಷದ ಯುವಕ ಸೇರಿ ಏಳು ಜನರಿಗೆ ಪಾಸಿಟಿವ್ ಬಂದಿದೆ. ಇಂದು 16 ಡಿಸ್ಚಾರ್ಜ್ ಆಗಿದ್ದು, ಆಸ್ಪತ್ರೆಯಲ್ಲಿ 15 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 76 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಶಿರಸಿಯಲ್ಲಿಂದು 35 ಮಂದಿಗೆ ಸೋಂಕು
ಶಿರಸಿ: ನಗರದಲ್ಲಿಂದು 35 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 9 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ರವಿವಾರ ಬಚಗಾಂವ 1, ವಿದ್ಯಾನಗರ 1, ಪಡಿಗೇರಿ 13, ಮಾರಿಗುಡಿ ರೋಡ್ 2, ವಾನಳ್ಳಿ 1, ಮರಾಠಿಕೊಪ್ಪ 2, ಟಿಎಸ್‍ಎಸ್ ರೋಡ್ 4, ಶೀಗೆಹಳ್ಳಿ 2, ಯಲ್ಲಾಪುರ ರೋಡ್ 1, ಬಾಳೆಹಳ್ಳಿ 1, ಸಹ್ಯಾದ್ರಿ ರೋಡ್ 4, ಬನವಾಸಿ ರೋಡ್ 1, ರಾಮನಗರ 1, ಕಂಡ್ರಾಜಿ 1 ಕೇಸ್ ಪಾಸಿಟಿವ್ ಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ ಮತ್ತು ಶ್ರೀಧರ್ ನಾಯ್ಕ ಹೊನ್ನಾವರ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.