Uttara Kannada
Trending

ಅಕ್ಟೋಬರ್ 12 ರಿಂದ 18 ತಿಂಗಳು ಶಿರಸಿ-ಕುಮಟಾ ರಸ್ತೆ ಸಂಚಾರ ಬಂದ್: ಪರ್ಯಾಯ ಮಾರ್ಗಕ್ಕೆ ಸೂಚನೆ

ಪರ್ಯಾಯ ವ್ಯವಸ್ಥೆಗೆ ಮಾರ್ಗಸೂಚಿ ಪ್ರಕಟ
ಅಕ್ಟೋಬರ್ 12 ರಿಂದ ಹೇಗಿರಲಿದೆ ಬದಲಿ ಮಾರ್ಗ ನೋಡಿ

[sliders_pack id=”1487″]

ಕುಮಟಾ: ಜಿಲ್ಲೆಯ ಶಿರಸಿ,ಕುಮಟಾ ರಸ್ತೆಯು ಸಾಗರಮಾಲಾ ಯೋಜನೆಯಡಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಪ್ರಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ 12 ರಿಂದ 18 ತಿಂಗಳುಗಳ ಕಾಲ ಇಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಬದಲಿ ಮಾರ್ಗವಾಗಿ ಕುಮಟಾ-ಸಿದ್ದಾಪುರ ಮಾರ್ಗದ ವ್ಯವಸ್ಥೆ ಇದ್ದು, ಲಘು ವಾಹನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಅಂಕೋಲ-ಯಲ್ಲಾಪುರ ಮಾರ್ಗವಾಗಿ ಶಿರಸಿ ಮಾರ್ಗ ಮತ್ತು ಹೊನ್ನಾವರ-ಮಾವಿನಗುಂಡಿ-ಸಿದ್ದಾಪುರ-ಶಿರಸಿ ಮಾರ್ಗಕ್ಕೆ ಎಲ್ಲಾತರದ ವಾಹನಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಸ್ತೆ ಉನ್ನತೀಕರಣ ಕಾರಣದಿಂದ ಸಾರ್ವಜನಿಕರು ಬದಲಿ ಮಾರ್ಗ ಬಳಸುವಂತೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಸ್ಪಷ್ಟಪಡಿಸಿದ್ದಾರೆ.


ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆ ಅಭಿವೃದ್ಧಿಗಾಗಿ 18 ತಿಂಗಳ ಕಾಲ ಬಂದ್ ಮಾಡುವಂತೆ ಮನವಿ ಮಾಡಿತ್ತು. ಭಾರತ್ ಮಾಲಾ ಫೇಸ್- 1 ಅಡಿಯಲ್ಲಿ ಬೇಲೇಕೇರಿ ಬಂದರನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ, ಬೇಲೇಕೇರಿ ಬಂದರು ಲಿಂಕ್ ರೋಡ್ ನಿಂದ 4.25 ಕಿ.ಮೀ. ಹಾಗೂ ಶಿರಸಿಯಿಂದ ಕುಮಟಾ ವರೆಗೆ 60 ಕಿ.ಮೀ. ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೊಳ್ಳಲಿದ್ದು, ಅಂದಾಜು 370 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. ಕಾಮಗಾರಿ ಈ ತಿಂಗಳಲ್ಲೇ ಪ್ರಾರಂಭವಾಗಲಿದ್ದು, ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ತನಕ ರಸ್ತೆಯನ್ನು ಬಂದ್ ಮಾಡಿ, ಪರ್ಯಾಯ ರಸ್ತೆ ಮಾರ್ಗ ಸೂಚಿಸಿ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.

ದೇವಿಮನೆ ಘಾಟ್ ಮಾರ್ಗ ಬಂದ್ ?:

  1. ಶಿರಸಿಯಿಂದ ಕುಮಟಾ- ಕಾರವಾರಕ್ಕೆ ತೆರಳುವ ವಾಹನಗಳಿಗೆ ತೊಂದರೆ ಉಂಟಾಗಲಿದೆ.
  2. ಕುಮಟಾಕ್ಕೆ ಹೋಗುವ ಲಘು ವಾಹನಗಳು ಸಿದ್ದಾಪುರ ಮಾರ್ಗವಾಗಿ ತೆರಳಬಹುದು.
  3. ಅಂಕೋಲಾ-ಕಾರವಾರಕ್ಕೆ ತೆರಳುವವರು ಯಲ್ಲಾಪುರ ಮಾರ್ಗವಾಗಿ ಎನ್‍ಎಚ್ 63 ನಲ್ಲಿ ಸಂಚರಿಸಬಹುದಾಗಿದೆ.
  4. ಭಾರೀ ಸೇರಿ ಎಲ್ಲಾ ತರಹದ ವಾಹನಗಳು ಶಿರಸಿಯಿಂದ- ಸಿದ್ದಾಪುರ- ಮಾವಿನಗುಂಡಿ- ಹೊನ್ನಾವರ- ಮಂಗಳೂರಿಗೆ ಸಂಚರಿಸಬಹುದಾಗಿದೆ.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button