ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 14 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಹಂದಿಗೋಣ, ನೆಲ್ಲಿಕೇರಿ, ಪಡುವಣಿ, ವಾಲಗಳ್ಳಿ, ಹೆರವಟ್ಟಾ, ಹನೇಹಳ್ಳಿ, ಸಾಣಿಕಟ್ಟಾ, ತಾರಮಕ್ಕಿ, ರುದ್ರಪಾದ ಮುಂತಾದ ಭಾಗಗಳಲ್ಲಿ ಪಾಟಿಟಿವ್ ಪ್ರಕರಣ ಪತ್ತೆಯಾಗಿದೆ.
ಹಂದಿಗೋಣದ 58 ವರ್ಷದ ಪುರುಷ, ನೆಲ್ಲಿಕೇರಿಯ 62 ವರ್ಷದ ಮಹಿಳೆ, 21 ವರ್ಷದ ಯುವಕ, 85 ವರ್ಷದ ವೃದ್ಧ, ಕುಮಟಾದ 40 ವರ್ಷದ ಪುರುಷ, 7 ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಪಡುವಣಿಯ 41 ವರ್ಷದ ಪುರುಷ, ಹೆರವಟ್ಟಾದ 50 ವರ್ಷದ ಪುರುಷ, 21 ವರ್ಷದ ಯುವತಿಗೆ ಪಾಸಿಟಿವ್ ಬಂದಿದೆ.
ವಾಲಗಳ್ಳಿಯ 51 ವರ್ಷದ ಪುರುಷ, ಹನೇಹಳ್ಳಿಯ 60 ವರ್ಷದ ಮಹಿಳೆ, ಸಾಣಿಕಟ್ಟಾದ 75 ವರ್ಷದ ವೃದ್ಧೆ, ತಾರಮಕ್ಕಿಯ 8 ವರ್ಷದ ಬಾಲಕ, ರುದ್ರಪಾದದ 25 ವರ್ಷದ ಯುವಕನಲ್ಲಿ ಸೋಂಕು ದೃಪಟ್ಟಿದೆ. ಇಂದು 14 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,754ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ ಐದು ಪಾಸಿಟಿವ್:
ಹೊನ್ನಾವರ: ತಾಲೂಕಿನಲ್ಲಿ ಇಂದು 5 ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹೊನ್ನಾವರ ಪಟ್ಟಣದ 50 ವರ್ಷದ ಮಹಿಳೆ, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದ 18 ವರ್ಷದ ಯುವಕ, ಮರಬಳ್ಳಿಯ 25 ವರ್ಷದ ಯುವತಿ, ಬಳ್ಕೂರಿನ 72 ವರ್ಷದ ಪುರುಷ, ಸುಬ್ರಹ್ಮಣ್ಯದ 22 ವರ್ಷದ ಯುವಕನಿಗೆ ಸೋಂಕು ತಗುಲಿದೆ.
ಅಂಕೋಲಾದಲ್ಲಿಂದು 11 ಕೊವಿಡ್ ಕೇಸ್
ಅಂಕೋಲಾ : ತಾಲೂಕಿನಲ್ಲಿ ಭಾನುವಾರದಿಂದ ಮಂಗಳವಾರದವರೆಗೆ ಸತತ 3 ದಿನ ಯಾವುದೇ ಹೊಸ ಕೊರೊನಾ ಕೇಸ್‍ಗಳು ಪತ್ತೆಯಾಗದೆ, ಹ್ಯಾಟ್ರಿಕ್ ಬಿಡುವು ನೀಡಿತ್ತಾದರೂ, ಬುಧವಾರ 11 ಹೊಸ ಕೊವಿಡ್ ಕೇಸ್‍ಗಳು ದಾಖಲಾಗಿದೆ. ಆಸ್ಪತ್ರೆಯಲ್ಲಿ ಕೊವಿಡ್ ಸಂಬಂಧಿತವಾಗಿ ಓರ್ವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದ್ದು, 24 ಜನ ತಮ್ಮ ತಮ್ಮ ಮನೆಗಳಲ್ಲಿಯೇ (ಹೋಂ ಐಸೋಲೇಶನ್) ಚಿಕಿತ್ಸೆ ಒಳಪಟ್ಟಿದ್ದಾರೆ. ಈ ಮೂಲಕ ಒಟ್ಟೂ 25 ಪ್ರಕರಣಗಳು ಸಕ್ರಿಯವಾಗಿದೆ.
ಎಲ್ಲೆಲ್ಲಿ ಸೋಂಕಿನ ಪ್ರಕರಣಗಳು : ಕೇಣಿ ದೇಶನಭಾಗ ವ್ಯಾಪ್ತಿಯಲ್ಲಿ 3, ಭಾವಿಕೇರಿ 1 ಮಠಾಕೇರಿ 2, ಕಬ್‍ಗಾಲ್ 4 ಮತ್ತು ಬಸ್ಸ ಡಿಪೋ ಹತ್ತಿರ 1 ಸೋಂಕಿನ ಪ್ರಕರಣಗಳು ದೃಢಪಟ್ಟಿದೆ. ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ತಾಲೂಕಾ ಆಸ್ಪತ್ರೆಗೆ ಸಂಬಂಧಿಸಿದಂತೆ 15 ರ್ಯಾಟ್ ಮತು 78 ಆರ್‍ಟಿಪಿಸಿಆರ್ ಮಾದರಿ ಸಂಗ್ರಹಿಸಲಾಗಿದೆ. ಈ ಮೂಲಕ ಒಟ್ಟಾರೆಯಾಗಿ 93 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಯಲ್ಲಾಪುರದಲ್ಲಿಂದು 4 ಮಂದಿಗೆ ಸೋಂಕು:
ಯಲ್ಲಾಪುರ: ಪಟ್ಟಣದಲ್ಲಿ ಇಂದು ನಾಲ್ಕು ಜನರಿಗೆ ಕೊರೊನಾ ಧೃಢಪಟ್ಟಿದ್ದು, 22 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಂದು ಅಕ್ಬರ್ ಗಲ್ಲಿಯಲ್ಲಿ 2, ಮಂಜುನಾಥನಗರ ಹಾಗೂ ಹೊಸಳ್ಳಿಗಳಲ್ಲಿ ತಲಾ ಒಬ್ಬರಿಗೆ ಸೋಂಕು ಧೃಢಪಟ್ಟಿದೆ.
ಜಿಲ್ಲೆಯಲ್ಲಿ 60 ಪಾಸಿಟಿವ್:
ಉತ್ತರಕನ್ನಡ ಜಿಲ್ಲೆಯಲ್ಲಿ 60 ಕರೊನಾ ಕೇಸ್ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 13,120ಕ್ಕೆ ಏರಿಕೆಯಾಗಿದೆ. 397 ಸಕ್ರೀಯ ಪ್ರಕರಣಗಳಿವೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ ಹಾಗೂ ಶ್ರೀಧರ ನಾಯ್ಕ ಹೊನ್ನಾವರ , ವಿಲಾಸ ನಾಯಕ ಅಂಕೋಲಾ