ಮಂಗಳವಾರದಿoದ ಪದವಿ ಕಾಲೇಜು ಆರಂಭ: ಇದು ಕಡ್ಡಾಯ!

ಕಾಲೇಜಿಗೆ ಸುಮ್ಮನೆ ತೆರಳುವಂತಿಲ್ಲ
ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಕರೊನಾ ಹಾವಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ರಾಜ್ಯದಲ್ಲಿ ಮಂಗಳವಾರದ0ದು ಪದವಿ ಕಾಲೇಜು ತರಗತಿಗಳು ಆರಂಭಾವಾಗಲಿದೆ. ಆದರೆ, ಈಗ ಕಾಲೇಜಿಗೆ ಸುಖಾ ಸುಮ್ಮನೆ ತೆರಳುವ ಹಾಗಿಲ್ಲ.
ಕಾಲೇಜಿಗೆ ತೆರಳುವ ಮುನ್ನ ಬೋಧಕ ಮತ್ತು ಬೋಧಕೇತರ ಹಾಗೂ ವಿದ್ಯಾರ್ಥಿಗಳು ಕರೊನಾ ನೆಗಿಟಿವ್ ಹೊಂದಿರುವುದು ಅಗತ್ಯವೆಂದು ರಾಜ್ಯ ಸರ್ಕಾರ ಇಲಾಖಾ ಆಯುಕ್ತಾಲಯ ತಿಳಿಸಿದೆ.

ಈ ಸಂಬoಧ ಸುತ್ತೋಲೆ ಹೊರಡಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಕಾಲೇಜು ತರಗತಿ ಆರಂಭವಾಗುವ 72 ಗಂಟೆಗಳ ಒಳಗಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗೊಳಪಟ್ಟು ನೆಗಿಟಿವ್ ವರದಿ ಹೊಂದಿರಬೇಕು ಎಂದು ತಿಳಿಸಿದ್ದಾರೆ. ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಕೋವಿಡ್ 19 ಪರೀಕ್ಷೆಯನ್ನು ರ‍್ಟಿಪಿಸಿಆರ್ ಮೂಲಕವೆ ಮಾಡಬೇಕಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಇದಕ್ಕಾಗಿ ಸಂಬoದಿಸಿದವರ ಗಂಟಲುದ್ರವ ಮಾದರಿಯನ್ನು ಆರೋಗ್ಯ ಸಿಬ್ಬಂದಿಗಳು ಸಂಗ್ರಹಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಮಾದರಿಯನ್ನು ಸಂಗ್ರಹಿಸಿ ಅದನ್ನು ಪ್ರಯೋಗಾಲಯಕ್ಕೆ ರವಾನಿಸಬೇಕು. ಪರೀಕ್ಷಾ ವರದಿಯನ್ನು ಮಿಂಚoಚೆ ಮೂಲಕ ರವಾನಿಸಬೇಕು. ಜಿಲ್ಲಾಧಿಕಾರಿಗಳು ಈ ಪ್ರಕ್ರಿಯೆ ಸುಲಭವಾಗಿ ಮುಗಿಸುವಂತೆ ನಿಗಾ ವಹಿಸಬೇಕೆಂದು ಸುತ್ತೊಲೆಯಲ್ಲಿ ತಿಳಿಸಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version