
ಮಹಿಳೆಯ ಕೈಯೊಳಗಿತ್ತು ಗುಂಡಿನ ಚೂರು
ಶಸ್ತ್ರಚಿಕಿತ್ಸೆ ನಡೆಸಿ ಗುಂಡಿನ ಚೂರು ತೆಗೆದ ವೈದ್ಯರು
ಕಾರವಾರ: ದಂಪತಿಗಳು ಕಟ್ಟಿಗೆ ತರಲು ಹೋದ ವೇಳೆ ಮಹಿಳೆಯ ಕೈಗೆ ಗುಂಡು ತಗಲಿದೆ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾದ ಗೋಯಲ್ ಅರಣ್ಯ ಪ್ರದೇಶದಲ್ಲಿ ನಡೆದಿದೆ. ರಸಿಕಾ ಗುಂಡು ತಗಲಿ ಗಾಯಗೊಂಡ ಮಹಿಳೆ. ಕಟ್ಟಿಗೆ ತರಲು ಅರಣ್ಯಕ್ಕೆ ತೆರಳಿದ್ದ ಮಹಿಳೆಯ ಕೈಗೆ ಏನೋ ಬಡಿದಂತಾಗಿ ಆಳವಾದ ಗಾಯವಾಗಿತ್ತು. ತಕ್ಷಣ ಪತಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು.
ಈ ಸ್ಕ್ಯಾನ್ ಮಾಡಿ ಪರೀಕ್ಷಿಸಿದಾಗ ಆಕೆ ಕೈ ಒಳಭಾಗದಲ್ಲಿ ಗುಂಡಿನ ಚೂರುಗಳು ಪತ್ತೆಯಾಗಿದೆ. ಕಾಡಿನಲ್ಲಿ ಕಾಡುಪ್ರಾಣಿ ಬೇಟೆಯಾಡುವವರು ಪ್ರಾಣಿ ಎಂದು ಗುಂಡು ಹಾರಿಸಿರುವ ಸಾಧ್ಯತೆಗಳಿವೆ ಎನ್ನುವ ಅನುಮಾನ ಮೂಡಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಮಹಿಳೆಯ ಕೈಯಿಂದ ಗುಂಡಿನ ಚೂರುಗಳನ್ನು ತೆಗೆದಿದ್ದಾರೆ. ಘಟನೆ ಸಂಬoಧ ಕಾರವಾರದ ಕದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ
- ಮೇ 21ರ ವರೆಗೆ ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆಯ ಮುನ್ನೆಚ್ಚರಿಕೆ
- ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ವಸತಿ ಸೌಲಭ್ಯ, ಆಕರ್ಷಕ ಸಂಬಳ
- ನಾಟಿ ವೈದ್ಯ ಬೆಳಂಬಾರದ ಹನುಮಂತಗೌಡರ ಮನೆಯಲ್ಲಿ ಹತ್ತು ಸಾವಿರ ಧನ್ವಂತರಿ ಜಪ, ಹೋಮಹವನ: ಸಮಸ್ತ ಜನರ ಆರೋಗ್ಯ ಸೌಭಾಗ್ಯಕ್ಕೆ ಪ್ರಾರ್ಥನೆ
- ಉಗ್ರರ ದಾಳಿ ಬಳಿಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುತ್ತಿರುವ ವ್ಯಾಪಾರಿಗಳು, ರೈತರು: ವೀಳ್ಯದೆಲೆ ರಪ್ತು ಮಾಡುವುದಿಲ್ಲ ಎಂದ ಬೆಳೆಗಾರರು