Uttara Kannada
Trending

ಕುಮಟಾದಲ್ಲಿ ಕಳ್ಳರ ಕೈಚಳಕ: ಟ್ರಸ್ಟ್ ಕಾರ್ಯಾಲಯಕ್ಕೆ ಕನ್ನ

ಒಂದುವರೆ ಲಕ್ಷಕ್ಕೂ ಅಧಿಕ ಕಳುವು
ಸಿಸಿಟಿವಿಯ ಡಿವಿಆರ್ ಹೊತ್ತೊಯ್ದ ಕಳ್ಳರು

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ದಿನೆ ದಿನೇ ಹೆಚ್ಚುತ್ತಲೆ ಇದ್ದು, ಇದೀಗ ಸಾಮಾಜಿಕ ಕಾರ್ಯಗಳ ಮೂಲಕ ಮನೆಮಾತಾಗಿರುವ ಕುಮಟಾ ತಾಲೂಕಿನ ಶ್ರೀ ಯಶೋಧರ ನಾಯ್ಕ ಟ್ರಸ್ಟ್ನ ಕಾರ್ಯಾಲಯಕ್ಕೂ ಸಹ ಕಳ್ಳರು ಪಕ್ಕಾ ಪ್ಲ್ಯಾನಿಂಗ್ ಮಾಡಿ ಕನ್ನಹಾಕಿರುವ ಘಟನೆ ನಡೆದಿದೆ. ಹೌದು..ಕುಮಟಾ ತಾಲೂಕಿನ ಹೊಸ ಬಸ್ ಸ್ಟ್ಯಾಂಡ್ ಸಮೀಪವಿರುವ ಶ್ರೀ ಯಶೋಧರ ನಾಯ್ಕ ಟ್ರಸ್ಟ್ ಕಾರ್ಯಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಸುಮಾರು 1 ಲಕ್ಷ 50 ಸಾವಿರಕ್ಕೂ ಕ್ಕೂ ಅಧಿಕ ನಗದನ್ನು ದೋಚಿಕೊಂಡು ಹೊಗಿದ್ದಾರೆ.

ಕದೀಮರು ಬುಧವಾರ ರಾತ್ರಿಯ ವೇಳೆ ಈ ಕೃತ್ಯ ಎಸಗಿದ್ದು, ಎಂದಿನoತೆ ಕಾರ್ಯಾಲಕ್ಕೆ ಬಂದ ಸಿಬ್ಬಂದಿಗಳಿಗೆ ಗುರುವಾರ ಮುಂಜಾನೆ ಶಾಕ್ ಕಾದಿತ್ತು. ಪ್ರತಿ ನಿತ್ಯದಂತೆ ತಮ್ಮ ಕಾರ್ಯದ ನಿಮಿತ್ತ ಸಿಬ್ಬಂದಿಗಳು ಕಾರ್ಯಾಲಯಕ್ಕೆ ಬರುವಷ್ಠರಲ್ಲಿ ಕಾರ್ಯಾಲಯದ ಬಾಗಿಲು ಮುರಿದಿತ್ತು ಹಾಗೂ ಲಾಕರ್‌ನಲ್ಲಿದ್ದಂತಹ ನಗದು ಮಾಯವಾಗಿತ್ತು.

ಕಾರ್ಯಾಲಯಕ್ಕೆ ಅಳವಡಿಸಲಾಗಿದ್ದ ಸಿ.ಸಿ ಕ್ಯಾಮರಾವನ್ನು ಗಮನಿಸಿರುವ ಕತರ್ನಾಕ್ ಕಳ್ಳರು ಹಣದ ಜೋತೆಗೆ ಸಿ.ಸಿ ಕ್ಯಾಮರಾದ ದೃಷ್ಯಾವಳಿಗಳನ್ನು ಸಂಗ್ರಹಿಸಿಕೊಳ್ಳುವ ಡಿ.ವಿ.ಆರ್ ಅನ್ನು ಸಹ ಕದ್ದೊಯ್ದಿದ್ದಾರೆ. ಘಟನೆಯ ಸಂಬAದ ಶ್ರೀ ಯಶೋಧರ ನಾಯ್ಕ ಟ್ರಸ್ಟ್ ಕಾರ್ಯಾಲಯಕ್ಕೆ ಕುಮಟಾ ಸಿ.ಪಿ.ಐ ಪರಮೇಶ್ವರ ಗುನಗಾ, ಕೈಂ ಪಿ.ಎಸ್.ಐ ಸುಧಾ ಅಘನಾಶಿನಿ ಬೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಜೋತೆಗೆ ಕಾರವಾರದಿಂದ ಬೆರಳಚ್ಚು ಸಂಗ್ರಹ ತಂಡ ಹಾಗೂ ಶ್ವಾನ ದಳವನ್ನು ಕರೆಯಿಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಹುಡುಕುವಿಕೆಗಾಗಿ ಬಲೆ ಬೀಸಲಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ, ಕುಮಟಾ

[sliders_pack id=”1487″]

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button