ಮಾಹಿತಿ
Trending

ಉತ್ತರಕನ್ನಡ ಜಿಲ್ಲೆಯಲ್ಲಿಂದು 12 ಕರೊನಾ ಕೇಸ್

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕರೊನಾ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ಸೋಂಕಿನ ಸಂಖ್ಯೆ ಇಳಿಮುಖವಾಗಿದೆ. ಜಿಲ್ಲೆಯಾದ್ಯಂತ ಇಂದು ಒಟ್ಟು 12 ಕರೊನಾ ಕೇಸ್ ದಾಖಲಾಗಿದೆ. ಸಿದ್ದಾಪುರದಲ್ಲಿ‌ ಅತಿಹೆಚ್ಚು ಅಂದರೆ ಏಳು ಕೇಸ್ ಪತ್ತೆಯಾಗಿದೆ. ಉಳಿದಂತೆ ಕುಮಟಾ 1, ಕಾರವಾರ 2_ಶಿರಸಿ 2, ಯಲ್ಲಾಪುರದಲ್ಲಿ 1 ಕೇಸ್ ಕಂಡುಬಂದಿದೆ.

ಕುಮಟಾದಲ್ಲಿ ಒಂದು, ಹೊನ್ನಾವರದಲ್ಲಿ ಶೂನ್ಯ ಪ್ರಕರಣ

ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಇಂದು ಕೇವಲ 1 ಕರೋನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಗ್ರಾಮೀಣ ಭಾಗವಾದ ಕಲ್ಲಬ್ಬೆಯ 57 ವರ್ಷದ ಮಹಿಳೆಗೆ ಕರೋನಾ ಪಾಸಿಟಿವ್ ಬಂದಿದ್ದು, ಇಂದು 1 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1980 ಕ್ಕೆ ಏರಿಕೆಯಾಗಿದೆ.

ಹೊನ್ನಾವರ: ತಾಲೂಕಿನಲ್ಲೂ ಕೋವಿಡ್ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಹೊನ್ನಾವರ ತಾಲ್ಲೂಕಿನಲ್ಲಿ ಕಳೆದ 15 ದಿನಗಳಿಂದ ಬೇರಳಣಿಕೆಯ ಜನರಲ್ಲಿ ಮಾತ್ರ ಪಾಸಿಟಿವ್ ಕಾಣಿಸಿ ಕೋಂಡಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ತಾಲೂಕಿನಲ್ಲಿ ಇಂದು ಯಾವುದೇ ಕೇಸ್ ಕಂಡುಬಂದಿಲ್ಲ.

ಅಂಕೋಲಾದಲ್ಲಿಂದು ಕೋವಿಡ್ ಶೂನ್ಯ ಪ್ರಕರಣ : ಗುಣಮುಖ 1

ಅಂಕೋಲಾ : ತಾಲೂಕಿನಲ್ಲಿ ಗುರುವಾರ ಯಾವುದೇ ಹೊಸ ಕೋವಿಡ್ ಕೇಸ್‌ಗಳು ಪತ್ತೆಯಾಗದೇ ಶೂನ್ಯ ಪ್ರಕರಣ ದಾಖಲಾಗಿದೆ. ಇದೇ ವೇಳೆ ಸೋಂಕು ಮಕ್ತರಾದ ಓರ್ವರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‌ನಲ್ಲಿರುವ 7 ಮಂದಿ ಸಹಿತ ಒಟ್ಟೂ 9 ಪ್ರಕರಣಗಳು ಸಕ್ರಿಯವಾಗಿದೆ.

ವಿಸ್ಮಯ ನ್ಯೂಸ್ ಯೋಗೇಶ್ ಮಡಿವಾಳ ಕುಮಟಾ, ವಿಲಾಸ ನಾಯಕ ಅಂಕೋಲಾ, ಶ್ರೀಧರ್ ನಾಯ್ಕ ಹೊನ್ನಾವರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button