
1998ರಲ್ಲಿ ಪ್ರಕರಣ ದಾಖಲಾಗಿತ್ತು
ವರ್ತನಕನ ಬಳಿ ಆರು ಸಾವಿರ ಸಾಲಪಡೆದಿದ್ದ
ಶಿರಸಿ: ಇದು ಬರೊಬ್ಬರಿ 23 ವರ್ಷಗಳ ಹಿಂದನ ಪ್ರಕರಣ. 1997ರಲ್ಲಿ ಬಂಗಾರದ ವರ್ತಕನ ಬಳಿ ವ್ಯಕ್ತಿಯೊಬ್ಬ ಹಣಪಡೆದುಕೊಂಡಿದ್ದ. ಆದರೆ, ಹಣ ವಾಪಸ್ ನೀಡಲಿಲ್ಲ ಎಂದು 1998ರಲ್ಲಿ ವರ್ತಕ ಈ ಸಂಬoಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು. ಆದರೆ, ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಈಗ ಅಂದರೆ 23 ವರ್ಷಗಳ ಬಳಿಕ ಆರೋಪಿ ಶಿರಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿ ದತ್ತಾತ್ರೇಯ ಹೆಗಡೆಯನ್ನು ಬಂಧಿಸಲಾಗಿದೆ. ಈಗ ಯಲ್ಲಾಪುರದ ಮಂಚಿಕೇರಿಯ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿ 1997ರಲ್ಲಿ ವರ್ತಕನ ಬಳಿಕ ಆರು ಸಾವಿರ ಸಾಲಪಡೆದುಕೊಂಡಿದ್ದ. ಈಗ ಕೇವಲ ಆರು ಸಾವಿರಕ್ಕಾಗಿ ಬಂಧನಕ್ಕೀಡಾಗುವ ಪರಿಸ್ಥಿತಿ ಬಂದಿದೆ.
ವಿಸ್ಮಯ ನ್ಯೂಸ್, ಶಿರಸಿ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಪದ್ಮಶ್ರೀ ಸುಕ್ರಿ ಗೌಡ ವಿಧಿವಶ : ಹಾಡು ಮುಗಿಸಿದ ಜಾನಪದ ಕೋಗಿಲೆ
- ಜಾತ್ರೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಡಿಕ್ಕಿ ಹೊಡೆದ ಅಪರಿಚಿತ ವಾಹನ: ವ್ಯಕ್ತಿ ಸ್ಥಳದಲ್ಲೇ ಸಾವು
- ಪುರಾಣ ಪ್ರಸಿದ್ಧ ಯಾಣದಲ್ಲಿ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ: ಭೈರವೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಸಮಯದಲ್ಲಿ ಕೊಂಚ ಬದಲಾವಣೆ
- ನಡುರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ
- ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ