
ಯಲ್ಲಾಪುರ: ಅಪ್ರಾಪ್ತ ಬಾಲಕಿಯ ಮೇಲೆ ಸಂಬಂಧಿಕನೇ ಅತ್ಯಾಚಾರ ಮಾಡಿದ ಘಟನೆ ತಾಲೂಕಿನ ಉಪಳೇಶ್ವರದಲ್ಲಿ ನಡೆದಿದೆ. 16 ವರ್ಷದ ಬಾಲಕಿಯನ್ನು ಹಣ್ಣು ಕೊಯ್ಯುವ ನೆಪದಲ್ಲಿ ತೋಟಕ್ಕೆ ಕರೆದುಕೊಂಡು ಹೋಗಿ ಸಂಬಂಧಿಕನೇ ಅತ್ಯಾಚಾರ ಮಾಡಿದ್ದಾನೆ. ಆರೋಪಿಯನ್ನು ಯಲ್ಲಾಪುರ ಉಪಳೇಶ್ವರದ ಚಂದ್ರಶೇಖರ್ ಪಾಂಡು ಸಿದ್ದಿ ಎಂದು ಗುರುತಿಸಲಾಗಿದೆ. ಈತ ತನ್ನ ಸಂಬಂಧಿಯಾಗಿರುವ 16 ವರ್ಷದ ಬಾಲಕಿಯನ್ನು ಹಣ್ಣು ಕೊಯ್ಯುವ ನೆಪ ಮಾಡಿಕೊಂಡು ತೋಟಕ್ಕೆ ಕರೆದುಕೊಂಡು ಹೋಗಿದ್ದು, ದುಷ್ಕøತ್ಯ ಮಾಡಿದ್ದಾನೆ.
ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಸ್ಮಯ ನ್ಯೂಸ್, ಯಲ್ಲಾಪುರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಕಲಿಕಾ ಸಾಮಗ್ರಿ ವಿತರಣೆ ನೆಪದಲ್ಲಿ ನೆರವು ನೀಡುವುದು ಬೇಡವೇ ಬೇಡ : JSW ಕಂಪನಿ ವಿರುದ್ಧ ಮತ್ತೆ ಸ್ಥಳೀಯ ಮೀನುಗಾರರ ಆಕ್ರೋಶ
- ವಿವೇಕನಗರ ವಿಕಾಸ ಸಂಘದಿಂದ ‘ಮಾಸದ ಕಾರ್ಯಕ್ರಮ
- ಅಂಕೋಲಾ ರೂರಲ್ ರೋಟರಿ ಕ್ಲಬ್ ಅಧ್ಯಕ್ಷರಾಗಿ ಪುಷ್ಪಲತಾ ನಾಯಕ, ಕಾರ್ಯದಶಿಯಾಗಿಸದಾನಂದ ಆಯ್ಕೆ
- ಕುಮಟಾದ ತಾಲೂಕಾಡಳಿತ ಸೌಧಕ್ಕೆ ಮುತ್ತಿಗೆ: ಏನಾಯ್ತು ನೋಡಿ?
- ಅಂಗಡಿ ಕೆಲಸಕ್ಕೆ ಹೋದ ಯುವತಿ ನಾಪತ್ತೆ