ಉತ್ತರಕನ್ನಡಕ್ಕೆ ಬ್ರಿಟನ್ ನಿಂದ ಬಂದವರೆಷ್ಟು? ಇವರ ವರದಿ ಏನಾಯ್ತು?

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 13 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ ಯಲ್ಲಾಪುರದಲ್ಲಿ 4, ಕುಮಟಾ 2, ಸಿದ್ದಾಪುರ 2, ಶಿರಸಿ 4, ಕಾರವಾರದಲ್ಲಿ ಒಂದು ಕೇಸ್ ದೃಢಪಟ್ಟಿದೆ.

ಕುಮಟಾ ತಾಲೂಕಿನಲ್ಲಿ ಇಂದು ಎರಡು ಕರೊನಾ ಸೊಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಗೋಕರ್ಣದ ಚೌಡಗೇರಿಯಲ್ಲಿ ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಗೋಕರ್ಣದ ಚೌಡಗೇರಿಯ 47 ವರ್ಷದ ಪುರುಷ, 46 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು 2 ಪ್ರಕರಣ ದೃಢಪಟ್ಟ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,999 ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಹೊನ್ನಾವರ ತಾಲೂಕಿನಲ್ಲಿ ಇಂದು ಯಾವುದೇ ಕರೊನಾ ಕೇಸ್ ಕಂಡುಬಂದಿಲ್ಲ.

ಬ್ರಿಟನ್‌ನಿಂದ ಬಂದಿದ್ದಾರೆ 14 ಮಂದಿ?

ಈಗ ಎಲ್ಲೆಡೆ ಬ್ರಿಟನ್ ಕರೊನಾ ಮಾದರಿ ಆತಂಕ ಕಾಡುತ್ತಿದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಗೆ ಬ್ರೀಟನ್‌ನಿಂದ ಇಲ್ಲಿಯವರೆಗೆ 14 ಜನರು ಆಗಮಿಸಿದ್ದು, ಇವರ ಪರೀಕ್ಷೆಯನ್ನು ಕೂಡ ಬೆಂಗಳೂರಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ನಡೆಸಲಾಗಿದೆ. ಇವರಲ್ಲಿ 12 ಜನರಿಗೆ ಕೊರೋನಾ ನೆಗೆಟಿವ್ ಬಂದಿದ್ದು, ಇನ್ನು ಇಬ್ಬರ ವರದಿ ಬರಬೇಕಾಗಿದೆ.

ರೂಪಾಂತರಿತ ಕೊರೋನಾ ಪತ್ತೆ ಸ್ಥಳೀಯ ಪ್ರಯೋಗಾಲಯದಲ್ಲಿ ಲಭ್ಯವಿಲ್ಲದ ಕಾರಣಕ್ಕೆ ವಿದೇಶದಿಂದ ಬಂದವರಲ್ಲಿ ಒಂದು ವೇಳೆ ರೂಪಾಂತರಿತ ಕೊರೋನಾ ಸೋಂಕು ಪತ್ತೆಯಾದರೆ, ಅವರ ಸಂಪರ್ಕದಲ್ಲಿ ಬರುವವರ ಗಂಟಲಿ ದ್ರವದ ಮಾದರಿಯನ್ನು ಕೂಡ ಬೆಂಗಳೂರಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳಿಸಬೇಕಾಗುತ್ತದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Exit mobile version